Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ನಟಿ ಲೀಲಾವತಿ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ ಶಿವರಾಜ್ ಕುಮಾರ್

ವಯೋಸಹಜ ಕಾರಣದಿಂದ ಹಾಸಿಗೆ ಹಿಡಿದಿರುವ ಹಿರಿಯನಟಿ ಲೀಲಾವತಿ ಅವರ ಮನೆಗೆ ನಟ ಶಿವರಾಜ್‌ ಕುಮಾರ್‌ ದಂಪತಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿರುವ ನಟ ವಿನೋದ್‌ ರಾಜ್‌ ಅವರ ಮನೆಗೆ ಪತ್ನಿಯೋಂದಿಗೆ ಆಗಮಿಸಿದ ಶಿವಣ್ಣ ಲೀಲಾವತಿ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರು. ನಂತರ ವಿನೋದ್‌ ರಾಜ್‌ ಅವರ ಬಳಿ ತಾಯಿಯ ಆರೋಗ್ಯ ವಿಚಾರಿಸಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಸಹ ಲೀಲಾವತಿಯವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಮನೆಗೆ ಆಗಮಿಸಿದ ಉಪ ಮುಖ್ಯಮಂರಿಗಳನ್ನು ವಿನೋದ್‌ ರಾಜ್‌ ಅವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಭಾನುವಾರ ನಟ ದರ್ಶನ್‌ ಅವರು ಕೂಡ ಲೀಲಾವತಿಯವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು.

ಇತ್ತೀಚೆಗೆ ಚಿತ್ರರಂಗದ ಹಲವು ನಟ ನಟಿಯರು ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ಅವರ ಮನೆಗೆ ತೆರಳಿ ವಯೋಸಹಜ ಕಾರಣದಿಂದ ಹಾಸಿಗೆ ಹಿಡಿದಿರುವ ನಟಿಯ ಆರೋಗ್ಯ ವಿಚಾರಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಟ ಅರ್ಜುನ್‌ ಸರ್ಜಾ ಅವರು ಕೂಡ ಲೀಲಾವತಿಯವರ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದರು.

ಕೆಲದಿನಗಳ ಹಿಂದೆ ಲೀಲಾವತಿಯವರು ನಿಧನರಾದರೆಂಬ ಸುಳ್ಳು ವದಂತಿಯನ್ನು ಹಬ್ಬಿಸಲಾಗಿತ್ತು. ಇದು ಅವರ ಪುತ್ರ ವಿನೋದ್‌ ರಾಜ್‌ ಅವರಿಗೆ ಬಹಳ ಬೇಸರ ತರಿಸಿತ್ತು. ಈ ಬಗ್ಗೆ ವಿನೋದ್‌ ರಾಜ್‌ ಅವರು ಸಂದರ್ಶನವೊಂದರಲ್ಲಿ ತಮ್ಮ ತಾಯಿಯ ಆರೋಗ್ಯದ ಬಗೆಗಿನ ಮಾಹಿತಿ ಹಂಚಿಕೊಂಡಿದ್ದರು. ಅಮ್ಮ ಆರೋಗ್ಯವಾಗಿದ್ದಾರೆ. ಅವರ ವಯಸ್ಸಿಗೆ ತಕ್ಕಂತೆ ಹೇಗೆ ಇರಬೇಕೋ ಹಾಗೆ ಇದ್ದಾರೆ ಅಮ್ಮ 86-87 ವಯಸ್ಸು ಮುಟ್ಟಿದ್ದಾರೆ. ಅವರ ಕಾಲದಲ್ಲಿ ಒಂದು ದಿನಕ್ಕೆ ನಾಲ್ಕು ಸಿನಿಮಾಗೆ ಪಾತ್ರ ಮಾಡಿದವರು. ಅಮ್ಮ ಒಟ್ಟು 650 ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಜನ ಯಾಕೆ ಅಮ್ಮನ ಸಾವಿನ ಸುದ್ದಿ ಹಬ್ಬಿಸಿದ್ರು ಅನ್ನೋದನ್ನು ಮಂಜುನಾಥನಿಗೆ ಬಿಟ್ಟಿದ್ದೀವಿ. ಅವನೇ ನೋಡಿಕೊಳ್ಳಬೇಕು ಅಷ್ಟೇ ಎಂದು ಹೇಳಿದ್ದರು.

ನಟಿ ಲೀಲಾವತಿಯವರು ಕಳೆದ ಕೆಲ ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ತಮ್ಮ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ದಶಕಗಳಕಾಲ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದ ಲೀಲಾವತಿಯವರು ತಮ್ಮ ಅತ್ಯದ್ಭುತ ನಟನೆಯ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ