Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಹೊಸ ಬಾಳಿಗೆ ಕಾಲಿಟ್ಟ ಸುಶ್ಮಿತಾ ಜಗ್ಗಪ್ಪ

ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋ ಮಜಾ ಭಾರತ ಖ್ಯಾತಿಯ ಸುಶ್ಮಿತಾ ಜಗ್ಗಪ್ಪ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ರೀಲ್ ನಲ್ಲಿ ಗಂಡ ಹೆಂಡತಿಯಾಗಿ ನಟಿಸುತ್ತಿದ್ದ ಈ ಜೋಡಿ ಇದೀಗ ನಿಜ ಜೀವನದಲ್ಲೂ ಸತಿಪತಿಗಳಾಗಿದ್ದಾರೆ.

ನೆನ್ನೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಸಿಂಧೂರ ಕನ್ವೆನ್ಷನ್ ಹಾಲ್ ನಲ್ಲಿ ಬಂಧು ಬಾಂಧವರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.

ಸುಶ್ಮಿತಾ ಜಗ್ಗಪ್ಪ ಮದುವೆಗೆ ನಟ ರವಿಚಂದ್ರನ್, ಪ್ರಜ್ವಲ್ ದೇವರಾಜ್, ನಿರಂಜನ್ ದೇಶಪಾಂಡೆ ದಂಪತಿ, ಮಂಜು ಪಾವಗಡ, ಶೃತಿ ಪುತ್ರಿ ಗೌರಿ, ಮಜಾ ಭಾರತ ತಂಡ ಸೇರಿದಂತೆ, ಕಿರುತೆರೆ ಹಾಗೂ ಬೆಳ್ಳಿತೆರೆಯ ಹಲವಾರು ನಟ ನಟಿಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದರು.

ಇತ್ತೀಚಿಗೆ ಸುಶ್ಮಿತ ಹಾಗೂ ಜಗ್ಗಪ್ಪ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವೇಳೆ ಜಗಪ್ಪ, ಸುಶ್ಮಿತಾ ಅವರಿಗೆ ಐದು ಗುಲಾಬಿಗಳನ್ನು ಹಿಡಿದುಕೊಂಡು ಒಂದೊಂದಾಗಿ ನೀಡುವ ಮೂಲಕ ಪ್ರಪೋಸ್ ಮಾಡಿದ್ದರು.

ಸುಶ್ಮಿತಾ ಹಾಗು ಜಗ್ಗಪ್ಪ ಜೋಡಿ ಜೊತೆಯಾಗಿ ಒಂದೇ ವೇದಿಕೆಯಲ್ಲಿ ಅನೇಕ ಸಲ ಗಂಡ ಹೆಂಡತಿ ಪಾತ್ರ ಮಾಡಿದ್ದಾರೆ. ಸುಶ್ಮಿತಾ ಹಾಗೂ ಜಗ್ಗಪ್ಪ ಇಬ್ಬರು ಕೂಡ ಪರಸ್ಪರ ಪ್ರೀತಿಸುತ್ತಿರುವುದು ಎಲ್ಲರಿಗೂ ತಿಳಿದಿತ್ತು. ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಸುಶ್ಮಿತಾ ಜಗಪ್ಪ ಅವರಿಗೆ ವಿಭಿನ್ನವಾಗಿ ಪ್ರಪೋಸ್ ಮಾಡಿ ಗಮನ ಸೆಳೆದಿದ್ದರು.

ನವೆಂಬರ್ 18ರಂದು ಈ ಜೋಡಿಯ ಮೆಹಂದಿ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದಿತ್ತು ಮೆಹಂದಿ ಕಾರ್ಯಕ್ರಮದ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಸುಶ್ಮಿತಾ ಹಾಗೂ ಜಗ್ಗಪ್ಪ ಇಬ್ಬರೂ ಕೂಡ ಮ್ಯಾಚಿಂಗ್ ಡ್ರೆಸ್ ತೊಟ್ಟು ಮಿಂಚಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ