ಅಹ್ಮದಾಬಾದ್ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ಸ್ ನಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿದೆ.
ಭಾರತ ನೀಡಿದ 240 ರನ್ ಗಳನ್ನು ಬೆನ್ನಟ್ಟಿದ ಆಸ್ಟ್ರೇಲಿಯ 24 ಓವರ್ ಅಂತ್ಯಕ್ಕೆ 172 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಮುಂದುವರೆದಿದ್ದಾರೆ.
ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 59 ಆಟ ಮುಂದುವರೆದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಅಂದುಕೊಂಡಂತೆ ಆರಂಭ ದೊರೆಯಲಿಲ್ಲ. 4 ರನ್ ಗೆ ಗಿಲ್ ಔಟಾದರೆ, ಶ್ರೇಯಸ್ ಅಯ್ಯರ್ (4) ಬಂದ ದಾರಿಯಲ್ಲೇ ಹೊರ ನಡೆದರು. ನಾಯಕ ರೋಹಿತ್ ಶರ್ಮಾ 3 ಸಿಕ್ಸರ್ ಹಾಗೂ ಫೋರ್ ಸೇರಿ 47ರನ್ ಗಳಿಸಿ ನಿರ್ಗಮಿಸಿದರು. ವಿರಾಟ್ ಕೊಹ್ಲಿ 54 ಮತ್ತು ಕನ್ನಡಿಗ ರಾಹುಲ್ 66 ರನ್ ಗಳಿಸಿ ಭಾರತ 240ರನ್ ಗಡಿ ದಾಟಿಸಲು ಸಹಾಯ ಮಾಡಿದರು.
ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಭಾರತವನ್ನು ಕಟ್ಟಿ ಹಾಕುವಲ್ಲಿ ಸಫಲರಾದರು. ವೇಗಿ ಸ್ಟಾರ್ಕ್ 3, ನಾಯಕ ಕಮಿನ್ಸ್ 2 ಹಾಗೂ ಹೇಜಲ್ವುಡ್ 2 ವಿಕೆಟ್ ಪಡೆದರು.





