Mysore
27
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಏಕದಿನ ವಿಶ್ವಕಪ್‌: ಫೈನಲ್‌ನಲ್ಲಿ ಈ ತಂಡ 65ಕ್ಕೆ ಆಲ್‌ಔಟ್‌ ಆಗುತ್ತೆ; ಮಾರ್ಷ್‌ ಭವಿಷ್ಯ

ನವದೆಹಲಿ : ಐಸಿಸಿ ಏಕದಿನ ವಿಶ್ವಕಪ್‌-2023 ಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರಾಗಲಿವೆ. ಈ ಪಂದ್ಯ ನರೇಂದ್ರ ಮೊದಿ ಕ್ರೀಡಾಂಗಣದಲ್ಲಿ ಭಾನುವಾರ ಭಾರತೀಯ ಕಾಲಮಾನ ಮದ್ಯಾಹ್ನ 2ಕ್ಕೆ ಆರಂಭವಾಗಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದ ಬಗ್ಗೆ ಆಸ್ಟ್ರೇಲಿಯಾ ಸ್ಟಾರ್‌ ಆಲ್‌ ರೌಂಡರ್‌ ಮಿಚೆಲ್‌ ಮಾರ್ಷ್‌  ಅವರು ಇದೀಗ ಫೈನಲ್‌ ಬಗ್ಗೆ ಭವಿಷ್ಯ ನುಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಐಪಿಎಲ್‌-2023ರಲ್ಲಿ ಡೆಲ್ಲಿ ಕ್ಯಾಫಿಟಲ್ಸ್‌ ಪ್ರೋಡ್ಕಾಸ್ಟ್‌ ಕಾರ್ಯಕ್ರಮದಲ್ಲಿ  ವಿಶ್ವಕಪ್‌ ಫೈನಲ್‌ ಕುರಿತಂತೆ ನೀಡಿದ್ದ ಹೇಳಿಕೆ ಭಾರೀ ವೈರಲ್‌ ಆಗಿದ್ದು, ಫೈನಲ್‌ ಪಂದ್ಯಕ್ಕೂ ಮುನ್ನಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಶ್ವಕಪ್‌-2023ರಲ್ಲಿ ಆಸ್ಟ್ರೇಲಿಯಾ ತಂಡ ಅಜೇಯವಾಗಿ ಉಳಿಯಲಿದ್ದು, ಫೈನಲ್‌ ನಲ್ಲಿ ಭಾರತವನ್ನು ಮಣಿಸಲಿದೆ. ಆಸ್ಟ್ರೇಲಿಯಾ ತಂಡವು ಫೈನಲ್‌ನಲ್ಲಿ ಭಾರತ ವಿರುದ್ಧ 450 ರನ್‌ಗಳನ್ನು ಕೇವಲ 2 ವಿಕೆಟ್‌ ಕಳೆದುಕೊಂಡು ಕಲೆಹಾಕಿದರೆ, ಭಾರತ ಕೇವಲ 65 ರನ್‌ ಗಳಿಗೆ ಆಲ್‌ಔಟ್‌ ಆಗಲಿದೆ ಎಂದು ಬವಿಷ್ಯ ನುಡಿದಿದ್ದರು.

ಈ ಬಾರಿಯ ವರ್ಲ್ಡ್‌ ಕಪ್‌ನಲ್ಲಿ  ಭಾರತ ತಂಡವು ಅಜೇಯ ದಾಖಲೆಗಳನ್ನು ದಾಖಲಿಸಿದ್ದು, ಒಂದೇ ಒಂದು ಪಂದ್ಯದಲ್ಲಿಯೂ ಸೋಲದೇ ಫೈನಲ್‌ ಪ್ರವೇಶ ಪಡೆದಿರುವ ಭಾರತ ತಂಡದ ಬಗ್ಗೆ ಮಾರ್ಷ್‌ರ ಹೇಳಿಕೆ ವಿವಾದವನ್ನು ಪಡೆದುಕೊಂಡಿದೆ.

ಲೀಗ್‌ನಲ್ಲಿ ಹೀನಾಯ ಸೋಲುಗಳ ಬಳಿಕ ಕಮ್‌ಬ್ಯಾಕ್‌ ಮಾಡಿದ ಆಸ್ಟ್ರೇಲಿಯಾ ತಂಡ ಸೆಮಿಸ್‌ನಲ್ಲಿ ದ. ಆಫ್ರಿಕಾ ವಿರುದ್ಧ ಜಯ ದಾಖಲಿಸಿ ಫೈನಲ್‌ ತಲುಪಿದೆ.

ವರ್ಲ್ಡ್‌ ಕಪ್‌ ಆರಂಭದ ಪಂದ್ಯದಲ್ಲಿ ಭಾರತ ಮತ್ತು ಆಸೀಸ್‌ ಮುಖಾಮುಖಿಯಾಗಿತ್ತು. ಆ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ