Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ : ಕೃಷಿ ತ್ಯಾಜ್ಯ ಸುಡದಂತೆ ಸುಪ್ರಿಂ ಸೂಚನೆ

ನವದೆಹಲಿ : ಪಂಜಾಬ್, ಹರಿಯಾಣ, ರಾಜಸ್ಥಾನ್ ಹಾಗೂ ಉತ್ತರ ಪ್ರದೇಶದಲ್ಲಿ ಕೃಷಿ ತ್ಯಾಜ್ಯಾ ಸುಡುತ್ತಿರುವುರಿಂದ ದೆಹಲಿ ಹಾಗೂ ಎನ್‌ಸಿಆರ್ ಭಾಗದಲ್ಲಿ ವಾಯುಮಾಲಿನ್ಯ ಕುಸಿತ ಕಂಡಿದೆ. ಗಾಳಿಯ ಗುಣಮಟ್ಟ ಕಳಪೆ ಮಟ್ಟಕ್ಕೆ ಕುಸಿದಿದ್ದು, ಅಪಾಯ ಮಟ್ಟ ಮೀರಿದೆ. ಈ ಹಿನ್ನೆಲೆ ಈ ನಾಲ್ಕು ರಾಜ್ಯಗಳಿಗೆ ಕೃಷಿ ತ್ಯಾಜ್ಯಗಳ ಸುಡುವುದನ್ನು ತಕ್ಷಣ ನಿಲ್ಲಿಸುವಂತೆ ಸುಪ್ರಿಂಕೋರ್ಟ್‌ ಸೂಚನೆ ನೀಡಿದೆ.

ನ್ಯಾ. ಸಂಜಯ್ ಕಿಶನ್ ಕೌಲ್, ಸುಧಾಂಶು ಧುಲಿಯಾ ಅವರಿದ್ದ ಪೀಠ ಪ್ರತಿ ವರ್ಷ ದೆಹಲಿ ಈ ರೀತಿಯ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ. ಪ್ರತಿ ಬಾರಿಯೂ ರಾಜಕೀಯ ಸಂಘರ್ಷ ಇರಬಾರದು ಎಂದು ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲರಿಗೆ ಸುಪ್ರೀಂಕೋರ್ಟ್ ತಿಳಿಸಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ವಿಷಯದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯ ಪೀಠ ಕೃಷಿ ತ್ಯಾಜ್ಯಗಳ ಸುಡುವುದು, ವಾಹನ ಮಾಲಿನ್ಯ ಮತ್ತು ತ್ಯಾಜ್ಯವನ್ನು ಬಯಲಿನಲ್ಲಿ ಸುಡುವುದು ಮುಂತಾದ ವಿಷಯಗಳ ವಿರುದ್ಧ ಎಚ್ಚರಿಕೆ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಇತ್ತ ದೆಹಲಿ ಹಾಗೂ ಎನ್‌ಸಿಆರ್‌ನಲ್ಲಿ ನ.10ಎರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಡೀಸೆಲ್ ವಾಹನಗಳಿಗೂ ನಿಷೇಧ ಹೇರಲಾಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ