Mysore
25
broken clouds

Social Media

ಭಾನುವಾರ, 29 ಮಾರ್ಚ್ 2026
Light
Dark

ಹಸುವನ್ನು ಕೊಂದು ದನಗಾಹಿಯ ಮೇಲೆ ಎರಗಿದ ಹುಲಿ

ನಂಜನಗೂಡು : ಹುಲಿಯೊಂದು ಹಸುವನ್ನು ಕೊಂದು ದನಗಾಹಿಯ ಮೇಲೆ ದಾಳಿ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ಹಡೆಯಾಲ ಬಳಿಯ ಮಹದೇವ ನಗರ ಗ್ರಾಮದಲ್ಲಿ ನಡೆದಿದೆ.

ಹುಲಿ ದಾಳಿಗೆ ಸಿಲುಕಿದ ಮಹದೇವ ನಗರ ಗ್ರಾಮದ ನಿವಾಸಿ ವೀರಭದ್ರ. ಭೋವಿ (70) ಅಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಮಹದೇವ ನಗರ ಗ್ರಾಮದ ಸಮೀಪವಿರುವ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಅರಣ್ಯ ವ್ಯಾಪ್ತಿಗೆ ಸೇರಿದ ಮತ್ತಿ ಮರದ ಜೇನುಕಟ್ಟೆ ಬಳಿ ಜಾನುವಾರು ಮೇಯಿಸುತ್ತಿದ್ದ ದನಗಾಯಿ ವೀರಭದ್ರ ಬೋವಿ ಜಾನುವಾರುಗಳನ್ನು ಮೇಯಿಸುತ್ತಿರುವ ಸಂದರ್ಭದಲ್ಲಿ ಹುಲಿ ಏಕಾಏಕಿ ದಾಳಿ ಮಾಡಿದೆ.

ವೀರಭದ್ರ ಬೋವಿ ಅವರ ಹಸುವನ್ನು ಕೊಂದು ರಕ್ತ ಹೀರುತ್ತಿರುವ ಸಂದರ್ಭದಲ್ಲಿ ತನ್ನ ಜಾನುವಾರವನ್ನು ರಕ್ಷಿಸಲು ಚಿರಾಟ ನಡೆಸಿ ಹತ್ತಿರ ತೆರಳಿದ ಸಂದರ್ಭದಲ್ಲಿ ನರಭಕ್ಷಕ ಹುಲಿ ವೀರಭದ್ರ ಬೋವಿಯ ಮೇಲೆ ದಾಳಿ ಮಾಡಿದೆ

ಹುಲಿಯಿಂದ ಗಂಭೀರ ಗಾಯಗೊಂಡಿರುವ ವೀರಭದ್ರ ಬೋವಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ರವಾನಿಸಲಾಗಿದೆ

ಸ್ಥಳಕ್ಕೆ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!