Mysore
25
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಭಾರತದಲ್ಲಿ ಕಳೆದ 9 ತಿಂಗಳ ಅವಧಿಯಲ್ಲಿ 145 ಹುಲಿಗಳ ಸಾವು

ಚಾಮರಾಜನಗರ : ಈಗ ಎಲ್ಲೆಲ್ಲೂ ಹುಲಿ ಉಗುರಿನದ್ದೇ ಮಾತು, ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದು ಏಕೆ? ಹುಲಿ ಉಗುರಿನ ಹಿಂದಿನ ನಂಬಿಕೆಯ ಹಿಂದೆ ಹಲವರು ಕಾರಣ ಹುಡುಕುತ್ತಿದ್ದಾರೆ. ಆದರೆ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಬಹಿರಂಗಗೊಂಡಿದೆ.

ಭಾರತದಲ್ಲಿ ಕಳೆದ 9 ತಿಂಗಳ ಅವಧಿಯಲ್ಲಿ 145 ಹುಲಿಗಳ ಸಾವನ್ನಪ್ಪಿವೆ. ಹುಲಿಗಳ ಸಂಖ್ಯೆಯ ಶೇಕಡಾ 4 ರಷ್ಟು ಹುಲಿಗಳು ಕೇವಲ 9 ತಿಂಗಳಲ್ಲಿ ಮೃತಪಟ್ಟಿವೆ. 2022 ರ ಗಣತಿ ಪ್ರಕಾರ ಭಾರತದ ಹುಲಿಗಳ ಸಂಖ್ಯೆ 3682. 2018 ರಲ್ಲಿ 2967 ಇದ್ದ ಹುಲಿಗಳ ಸಂಖ್ಯೆ 2022 ರಲ್ಲಿ 3682 ಕ್ಕೆ ಏರಿಕೆಯಾಗಿದೆ. ಆದರೆ ಜನವರಿಯಿಂದ ಸೆಪ್ಟೆಂಬರ್ ತಿಂಗಳವರೆಗೆ 145 ಹುಲಿಗಳು ಸಾವನ್ನಪ್ಪಿವೆ.

ಮಹತ್ವದ ಪತ್ರ ಬರೆದ ರಾಜ್ಯಸಭಾ ಸಂಸದ
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್‌ಟಿಸಿಎ) ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಬರೆದ ಪತ್ರದಲ್ಲಿ ಈ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಹುಲಿಗಳ ಸಾವಿನ ಬಗ್ಗೆ ತನಿಖೆ ಆರಂಭಿಸಲಾಗಿದೆಯೇ? ಬೇಟೆ ಹಾಗೂ ವಿದ್ಯುದಾಘಾತ ಪ್ರಮುಖ ಕಾರಣಗಳೆಂದು ವರದಿಯಾಗಿದೆ. ಹುಲಿಗಳ ಸಾವಿನ ಸಂಖ್ಯೆ ಕಡಿಮೆ ಮಾಡಲು ತುರ್ತು ಕ್ರಮಗಳೇನು? ಹುಲಿಗಳ ಸಾವಿನ ಬಗ್ಗೆ ವನ್ಯಜೀವಿ ತಜ್ಞರ ಅಭಿಪ್ರಾಯಗಳೇನು? ಈ ಬಗ್ಗೆ 15 ದಿನಗಳ ಒಳಗೆ ಮಾಹಿತಿ ನೀಡಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಸೂಚನೆ ನೀಡಿದ್ದಾರೆ.

ಹುಲಿ ಸಾವಿನ ರಹಸ್ಯವೇನು?
ಹುಲಿಗಳ ಸಾವಿನ ಬಗ್ಗೆ ಎನ್‌ಟಿ‌ಸಿಎ ಪ್ರತಿದಿನ ತನ್ನ ವೆಬ್‌ಸೈಟ್‌ ನಲ್ಲಿ ಮಾಹಿತಿ ಅಪ್‌ಲೋಡ್ ಮಾಡುತ್ತದೆ. ಹುಲಿ ಯಾವ ಕಾರಣದಿಂದ ಸತ್ತಿದೆ, ನೈಸರ್ಗಿಕವಾಗಿ ಮೃತಪಟ್ಟಿತಾ? ಬೇಟೆಯಾಡಲಾಗಿತ್ತಾ? ವಿದ್ಯುದಾಘಾತದಿಂದ ಮೃತಪಟ್ಟಿತಾ ಎಂಬಿತ್ಯಾದಿ ಕಾರಣಗಳನ್ನು ನಮೂದಿಸಲಾಗುತ್ತದೆ.

ಆದರೆ ಇತ್ತೀಚೆಗೆ ಹುಲಿ ಸಾವಿಗೆ ಯಾವುದೇ ಕಾರಣವನ್ನು ಎನ್‌ಟಿ‌ಸಿಎ ನಮೂದಿಸುತ್ತಿಲ್ಲ. ಈ ನಡೆ ಅನುಮಾನಕ್ಕೆ ಕಾರಣವಾಗಿದೆ. ಹುಲಿಗಳು ಅನೈಸರ್ಗಿಕವಾಗಿ ಸತ್ತಿದ್ದರೆ ನಿಜಕ್ಕೂ ಕಳವಳಕಾರಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ