Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಏಷ್ಯನ್‌ ಗೇಮ್ಸ್‌: ಹಾಕಿ- ಜಪಾನ್ ಮಣಿಸಿ ಚಿನ್ನದ ಪದಕ ಗೆದ್ದ ಭಾರತ

ಹಾಂಗ್‌ಝೌ : ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಜಪಾನ್ ತಂಡವನ್ನು 5-1 ಅಂತರದ ಗೋಲುಗಳಿಂದ ಮಣಿಸಿದ ಭಾರತ ಪುರುಷರ ತಂಡ ಚಿನ್ನದ ಪದಕ ಜಯಿಸಿದೆ.

ಈ ಮೂಲಕ ಈ ವರ್ಷದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ 22ನೇ ಚಿನ್ನದ ಪದಕ ಸಿಕ್ಕಿದೆ. ಈ ಮೂಲಕ ಭಾರತವು ನೂರು ಪದಕಗಳ ಗಡಿ ದಾಟುವುದು ಖಚಿತಪಟ್ಟಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 100 ಪದಕಗಳ ಗಡಿ ದಾಟುತ್ತಿರುವುದು ಇದೇ ಮೊದಲು. ಭಾರತ ಈಗಾಗಲೇ 95 ಪದಕಗಳನ್ನು ಗೆದ್ದಿದೆ. ಅರು ಇತರ ಪದಕಗಳನ್ನು ಕ್ರೀಡಾಪಟುಗಳು ಖಚಿತಪಡಿಸಿದ್ದಾರೆ.

ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಸೋನಮ್ ಮತ್ತು ಕಿರಣ್ ಚೀನಾದ ಜಿಯಾ ಲಾಂಗ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದಾರೆ. ಸೆಪೆಕ್‌ ಟಕ್ರಾ ಕ್ರೀಡೆಯ ರೆಗು ವಿಭಾಗದಲ್ಲಿ ಮಹಿಳೆಯರ ತಂಡವು ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್ ವಿರುದ್ಧ ಸೋತು ಐತಿಹಾಸಿಕ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಫೈನಲ್ ತಲುಪಿದ್ದು ಭಾರತಕ್ಕೆ ಇನ್ನೂ ಎರಡು ಬೆಳ್ಳಿ ಪದಕ ಖಚಿತವಾಗಿದೆ. ಆರ್ಚರಿಯಲ್ಲಿ ಪುರುಷರ ರಿಕರ್ವ್ ತಂಡ ಬೆಳ್ಳಿ ಪದಕ ಗೆದ್ದರೆ, ಮಹಿಳೆಯರ ರಿಕರ್ವ್ ತಂಡ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ. ಋತುರಾಜ್ ಗಾಯಕ್ವಾಡ್ ನೇತೃತ್ವದ ಪುರುಷರ ಕ್ರಿಕೆಟ್ ತಂಡವು ಏಷ್ಯನ್ ಗೇಮ್ಸ್ನ ಫೈನಲ್‌ಗೆ ಪ್ರವೇಶಿಸಿದ್ದು, ರಾಷ್ಟ್ರಕ್ಕೆ ಕನಿಷ್ಠ ಬೆಳ್ಳಿ ಪದಕದ ಭರವಸೆ ಸಿಕ್ಕಿದೆ. ಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ