Mysore
27
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಕಾವೇರಿಗಾಗಿ ಕಾನೂನು ಸಂಘರ್ಷಕ್ಕೆ ಇಳಿದ ಮಂಡ್ಯದ ಇಬ್ಬರು ರೈತರು

ಮಂಡ್ಯ : ಕಾವೇರಿ‌‌ ನೀರಿಗಾಗಿ ನಾಡಿನ‌ ಹಿತರಕ್ಷಣೆಗೆ ಹೋರಾಡುತ್ತಿರುವ ರೈತರು ಮತ್ತು ಸರ್ಕಾರದ ಹೋರಾಟಕ್ಕೆ ಮಂಡ್ಯ ಜಿಲ್ಲೆಯ ಇಬ್ಬರೂ ರೈತರು ಕೈ ಜೋಡಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಮೂಲಕ ಕಾನೂನು ಸಂಘರ್ಷಕ್ಕೆ‌ ಇಳಿದಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ತರಿಕೇರೆ ಗ್ರಾಮದ ಪ್ರಗತಿಪರ ರೈತ ಕೆ ಕೆಂಪರಾಜು ಮತ್ತು ಪಾಂಡವಪುರದ ನಿವೃತ ಯೋಧ ಮತ್ತು ರೈತ ಆರ್ ಪಿ ರವಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಮೂಲ ದಾವೆಯಲ್ಲಿ ತಮ್ಮನ್ನು ಪಕ್ಷಗಾರನ್ನಾಗಿಸಿ ರೈತರ ಅಹವಾಲು ‌ಆಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಈಗಾಗಲೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ರೈತಸಂಘದ ಪರವಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು ಇದೀಗ ಇಬ್ಬರೂ ರೈತರು ಸಲ್ಲಿಸಿರುವ ಅರ್ಜಿಗಳು ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು ಸರ್ಕಾರದ ಜೊತೆ ರೈತರು ಮತ್ತು ಕಾವೇರಿ‌ ಜಲಾನಯನ ಪ್ರದೇಶದ ವಾಸ್ತವ ಪರಿಸ್ಥಿತಿ ಯನ್ನು ನ್ಯಾಯಾಲಯದ ಗಮನಕ್ಕೆ ತರಲು ಅವಕಾಶವಾಗಲಿದೆ.

ಕಾನೂನು ಸಂಘರ್ಷಕ್ಕೆ ಮಂಡ್ಯ ರೈತರು ಮುಂದಾಗುವ ಮೂಲಕ ತಮ್ಮ ಹೋರಟ ಕೇವಲ‌ ಸಾಂಕೇತಿಕವಾಗಿರದೆ ರೈತರ ಹಿತರಕ್ಷಣೆಗೆ ನೆರೆಯ ರಾಜ್ಯದ ಕಾನೂನು ‌ಹೋರಟಕ್ಕೆ ಪ್ರತಿ ಸವಾಲು ಎಸೆಯುವ ಮೂಲಕ ಗಮನ‌ ಸೆಳೆದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!