Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರ್ಖಂಡ್ ಸಿಎಂಗೆ ಇಡಿ ಸಮನ್ಸ್ ಜಾರಿ

ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ಶನಿವಾರ ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಆಗಸ್ಟ್ 24 ರಂದು ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಜಾರ್ಖಂಡ್ ಸಿಎಂ ಸೋರೆನ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.

ಇದಕ್ಕೂ ಮೊದಲು ಆಗಸ್ಟ್ 14 ರಂದು, ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋರೆನ್ ಅವರಿಗೆ ಇಡಿ ಸಮನ್ಸ್ ನೀಡಿತ್ತು. ಆದರೆ, ರಾಜ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ತಯಾರಿಯಲ್ಲಿ ನಿರತರಾಗಿದ್ದರಿಂದ ಸೋರೆನ್ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ಸ್ವಾತಂತ್ರ್ಯ ದಿನದ ಕಾರ್ಯಕ್ರಮದ ಸಿದ್ಧತೆಗಳು ಒಂದು ವಾರದ ಮುಂಚೆಯೇ ಪ್ರಾರಂಭವಾಗುತ್ತವೆ ಮತ್ತು ಈ ಸಂಬಂಧ ಅನೇಕ ಸಭೆಗಳು ನಿಗದಿಯಾಗಿರುತ್ತವೆ. ಆಗಸ್ಟ್ 14 ಒಂದು ಪ್ರಮುಖ ದಿನವಾಗಿದೆ. ಆಗಸ್ಟ್ 14 ರಂದು ನಿಮ್ಮ ಮುಂದೆ ಹಾಜರಾಗುವಂತೆ ನನಗೆ ಸಮನ್ಸ್ ನೀಡಿರುವುದು ಉದ್ದೇಶಪೂರ್ವಕ ಮತ್ತು ಜಾರ್ಖಂಡ್ ರಾಜ್ಯದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರ ಮತ್ತು ಜಾರ್ಖಂಡ್ ರಾಜ್ಯದ ಜನರ ಖ್ಯಾತಿಯನ್ನು ಹಾಳುಮಾಡುವ ತಂತ್ರ ಎಂದು ಹೇಮಂತ್ ಸೊರೆನ್ ಅವರು ಹೇಳಿದ್ದರು.

ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ನಡೆಸಿರುವ ಅಕ್ರಮ ಗಣಿಕಾರಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಿಮಂತ್ ಸೊರೆನ್ ಹೇಳಿಕೆ ದಾಖಲಿಸಲು ಸಮನ್ಸ್ ನೀಡಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ