Mysore
20
few clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ವಿಮಾನದ ಟಾಯ್ಲೆಟ್​ನಲ್ಲಿ ಕುಸಿದು ಬಿದ್ದು ಪೈಲಟ್ ಸಾವು : 271 ಪ್ರಯಾಣಿಕರಿದ್ದ ವಿಮಾನ ತುರ್ತು ಭೂಸ್ಪರ್ಶ

ಮಿಯಾಮಿ : ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಿಮಾನದ ಟಾಯ್ಲೆಟ್​ನಲ್ಲಿ ಪೈಲಟ್​ ಮೃತಪಟ್ಟಿದ್ದು ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. 271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಾಣಿಜ್ಯ ವಿಮಾನದ ಟಾಯ್ಲೆಟ್​ನಲ್ಲಿ ಕುಸಿದುಬಿದ್ದು ಪೈಲಟ್ ಸಾವನ್ನಪ್ಪಿದ್ದಾರೆ.

ತಕ್ಷಣವೇ ವಿಮಾನವನ್ನು ಪನಾಮದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು, LATAM ಏರ್​ಲೈನ್ಸ್​ ವಿಮಾನ ಟೇಕ್ ಆಫ್ ಆದ ಮೂರು ಗಂಟೆಗಳ ನಂತರ ಸಾವನ್ನಪ್ಪಿದ್ದಾರೆ, ತಕ್ಷಣವೇ ಸಿಬ್ಬಂದಿ ತಿರ್ತು ಚಿಕಿತ್ಸೆ ನೀಡಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ವಿಮಾನವು ಪನಾಮ ಸಿಟಿಯ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ, ವೈದ್ಯಕೀಯ ತಜ್ಞರು ಪೈಲಟ್ ಅನ್ನು ಪರೀಕ್ಷಿಸಲು ಧಾವಿಸಿದರು, ಆದರೆ ಅಷ್ಟೊರೊಳಗೆ ಅವರು ಮೃತಪಟ್ಟಿದ್ದರು.ಇವಾನ್ ಅವರು 25 ವರ್ಷಗಳ ಅನುಭವ ಹೊಂದಿರುವ ಅನುಭವಿ ಪೈಲಟ್ ಆಗಿದ್ದರು. ವಿಮಾನವು ಮಂಗಳವಾರ ಪನಾಮ ನಗರದಿಂದ ಹೊರಟು ಚಿಲಿಯ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಿತು.

ಇವಾನ್ ಅಂದೌರ್​ಗೆ 56 ವರ್ಷ, ಅವರ 25 ವರ್ಷಗಳ ಸೇವೆ, ಸಮರ್ಪಣೆ, ಅಮೂಲ್ಯ ಕೊಡುಗೆಗಾಗಿ ನಾವು ಕೃತಜ್ಞರಾಗಿದ್ದೇವೆ, ಹಾರಾಟದ ಸಮಯದಲ್ಲಿ ಪೈಲಟ್ ಜೀವ ಉಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!