Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ರಾಜ್ಯದ ಇಬ್ಬರಿಗೆ ರಾಷ್ಟ್ರಪತಿ ಪದಕ ಮತ್ತು 18 ಮಂದಿಗೆ ವಿಶಿಷ್ಟ ಸೇವಾ ಪದಕ ಪ್ರದಾನ

ಬೆಂಗಳೂರು: 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಕೊಡಮಾಡುವ ರಾಷ್ಟ್ರಪತಿ ಪದಕಕ್ಕೆ ರಾಜ್ಯದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಪೊಲೀಸ್‌ ವಿಶಿಷ್ಟ ಸೇವಾ ಪದಕಕ್ಕೆ 18 ಮಂದಿ ಪೊಲೀಸ್‌ ಅಧಿಕಾರಿಗಳು ಭಾಜನರಾಗಿದ್ದಾರೆ.

ಪೊಲೀಸ್‌ ಇಲಾಖೆಗೆ ಸಲ್ಲಿಸಿದ ಗಣನೀಯ ಸೇವೆಗೆ ಕೇಂದ್ರ ಗೃಹ ಸಚಿವಾಲಯ ಪದಕ ಪ್ರದಾನ ಮಾಡಲಿದೆ. ಅಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.

ರಾಷ್ಟ್ರಪತಿ ಪದಕ:
ಎಸ್. ಮುರುಗನ್, ಎಡಿಜಿಪಿ
ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ

ವಿಶಿಷ್ಟ ಸೇವಾ ಪದಕ:
ಸಂದೀಪ್ ಪಾಟೀಲ್, ಐಜಿಪಿ
ಬಿ ಎಸ್ ಮೋಹನ್ ಕುಮಾರ್, ಡಿವೈಎಸ್‌ಪಿ
ನಾಗರಾಜ್, ಎಸಿಪಿ
ಶಿವಶಂಕರ್, ಅಸಿಸ್ಟೆಂಟ್ ಡೈರೆಕ್ಟರ್
ಭೀಮಾರಾವ್ ಗಿರೀಶ್, ಎಸ್ಪಿ
ರಾಘವೇಂದ್ರ ಹೆಗ್ಡೆ , ಎಸ್‌ಪಿ
ಜಗದೀಶ್ ಹೆಚ್.ಎಸ್, ಎಸಿಪಿ
ಕೇಶವಮೂರ್ತಿ ಗೋಪಾಲಯ್ಯ, ಡಿಎಸ್‌ಪಿ
ನಾಗಯ್ಯ ನಾಗರಾಜು, ಡಿಎಸ್‌ಪಿ
ಬಿ.ಎನ್ ಶ್ರೀನಿವಾಸ್, ಡಿಎಸ್‌ಪಿ
ಅಂಜುಮಾಲ ನಾಯ್ಕ್, ಡಿವೈಎಸ್‌ಪಿ
ಅನಿಲ್ ಕುಮಾರ್ ಪ್ರಭಾಕರ್, ಪಿಐ
ಅಶೋಕ್ ಆರ್.ಪಿ, ಪಿಐ
ರಾಮಪ್ಪ ಗುತ್ತೇರ್, ಪಿಐ
ಶಂಕರ, ಹೆಚ್‌ಸಿ
ಕೆ.ವೆಂಕಟೇಶ್, ಹೆಚ್‌ಸಿ
ಕುಮಾರ್, ಎಹೆಚ್‌ಸಿ
ವಿ.ಬಂಗಾರು, ಕೆಎಸ್‌ಆರ್‌ಪಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ