ಚಾಮರಾಜನಗರ : ಜಲಕ್ರೀಡೆಯಲ್ಲಿ ತೊಡಗಿದ್ದ ಬೆಂಗಳೂರು ಮೂಲದ ಆರು ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ಶಿವನ ಸಮುದ್ರ ಬಳಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಬಳಿ ಕಾವೇರಿ ನದಿ ಪಾತ್ರದಲ್ಲಿ ಬೆಂಗಳೂರು ಮೂಲದ ಮಕ್ಕಳು ಸೇರಿದಂತೆ ಆರು ಮಂದಿ ಜಲ ಕ್ರೀಡೆಯಲ್ಲಿ ತೊಡಗಿರುವಾಗ ಹಠತ್ತಾಗಿ ನದಿ ಪಾತ್ರದಲ್ಲಿ ನೀರು ಹರಿವು ಹೆಚ್ಚಾಗಿದ್ದರಿಂದ ಬಂಡೆಗಳ ಸಹಾಯದ ಮೂಲಕ ಬರಲು ಆಗದೇ ಪ್ರಾಣಾಪಾಯದಲ್ಲಿ ಇರುವಾಗ ಇದನ್ನು ಕಂಡ ಸ್ಥಳೀಯರು ಹಗ್ಗ ಮತ್ತು ಬೋಟ್ ಮೂಲಕ ಆರು ಮಂದಿಯನ್ನು ಸುರಕ್ಷಿತವಾಗಿ ನದಿ ದಡ ಸೇರಿಸಿ ಮನವೀಯತೆ ಮರೆದರು.
ಕಾವೇರಿ ನದಿ ಪಾತ್ರದಲ್ಲಿ ನೀರು ಹರಿವು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ನದಿ ಪಾತ್ರದತ್ತ ಹೋಗಬಾರದೆಂದು ಈಗಾಗಲೇ ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಪ್ರವಾಸಕ್ಕೆ ಬರುವವರು ಜಲಕ್ರೀಡೆ ಹಾಗೂ ಸೆಲ್ಫಿಗಾಗಿ ಹೋಗುತ್ತಿರುವುದು ವಿಪರ್ಯಾಸವಾಗಿದೆ.