Mysore
22
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಎನ್‌ಡಿಎ ಸಭೆಯಲ್ಲಿ ಅಜಿತ್ ಪವಾರ್ ಬಣ ಭಾಗವಹಿಸಲಿದೆ: ಪ್ರಫುಲ್ ಪಟೇಲ್

ನವದೆಹಲಿ: ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ಬಣ ಮತ್ತು ಅದರ 15 ಶಾಸಕರು ಸೋಮವಾರ ಮುಂಬೈನ ವೈಬಿ ಚವಾಣ್ ಸೆಂಟರ್‌ನಲ್ಲಿ ಶರದ್ ಪವಾರ್ ಅವರನ್ನು ಭೇಟಿ ಮಾಡಿ, ಪಕ್ಷ ಒಗ್ಗಟ್ಟಿನಿಂದ ಇರುವಂತೆ ನೋಡಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ.

ಈ ಮಧ್ಯೆ ಮಂಗಳವಾರ ದೆಹಲಿಯಲ್ಲಿ ನಡೆಯಲಿರುವ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ಸಭೆಯಲ್ಲಿ ಅಜಿತ್ ಪವಾರ್ ಮತ್ತು ಅವರ ಬಣ ಭಾಗವಹಿಸಲಿದೆ ಎಂದು ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್ ಅವರು ತಿಳಿಸಿದ್ದಾರೆ.

“ಶರದ್ ಪವಾರ್ ಅವರೊಂದಿಗಿನ ಇಂದಿನ ಸಭೆಯಲ್ಲಿ, ಎನ್‌ಸಿಪಿ ಒಗ್ಗಟ್ಟಿನಿಂದ ಇರುವುದನ್ನು ಖಚಿತಪಡಿಸಿಕೊಳ್ಳಲು ನಾವು ಮತ್ತೆ ಅವರನ್ನು ಕೇಳಿಕೊಂಡಿದ್ದೇವೆ” ಎಂದು ಪಟೇಲ್ ಹೇಳಿದ್ದಾರೆ.

ಭಾನುವಾರ ನಡೆದ ಸಭೆಯಲ್ಲಿ ಶರದ್ ಪವಾರ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದ ಶಾಸಕರು (ಅಜಿತ್ ಪವಾರ್ ಬಣದ) ಇಂದು ಹಾಜರಿದ್ದರು ಎಂದು ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ