Mysore
28
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಗುಂಡ್ಲುಪೇಟೆ: ರಕ್ಷಣಾ ಬೇಲಿ ವಿದ್ಯುತ್‌ ಸ್ಪರ್ಶದಿಂದ ಕಾಡಾನೆ ಸಾವು

ಬೇಗೂರು (ಗುಂಡ್ಲುಪೇಟೆ):  ಸಮೀಪದ ಕುರುಬರಹುಂಡಿ ಗ್ರಾಮದಲ್ಲಿ ಅಕ್ರಮವಾಗಿ ಬೆಳೆ ರಕ್ಷಣೆಗೆ ಜಮೀನಿನ ಸುತ್ತ ಹಾಯಿಸಲಾಗಿದ್ದ ವಿದ್ಯುತ್ತ್ ಸ್ಪರ್ಶದಿಂದ ಕಾಡಾನೆಯೊಂದು ಮೃತ್ತಪಟ್ಟಿರುವ ಘಟನೆ ನಡೆದಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಓಂಕಾರ ಅರಣ್ಯವಲಯದ ಕುರಬರಹುಂಡಿ (ಶಿವಕುಮಾರಪುರ) ಗ್ರಾಮದ ಹೊರವಲಯದ ಕಾಡಂಚಿನ ಶಿವರಾಜಪ್ಪ ಎಂಬುವರ ಜಮೀನಿನಲ್ಲಿ ಕಾಡಿನಿಂದ ಆಹಾರ ಅರಸಿ ನಾಡಿನತ್ತ ಬಂದ ಸುಮಾರು ೨೫ ರಿಂದ ೩೦ ವರ್ಷದ ಗಂಡಾನೆ (ಒಂಟಿ ಸಲಗ) ಸಾವಿಗೀಡಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಮೃತ ಕಾಡಾನೆಯ ಕಳೆಬರಹವನ್ನು ಸ್ಥಳದಲ್ಲೆ ಹೂಳಲಾಯಿತು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಿ.ಎಫ್.ಒ ರಮೇಶ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎ.ಸಿ.ಎಫ್. ರವೀಂದ್ರ , ವಲಯ ಅರಣ್ಯ ಅಧಿಕಾರಿ ಸತೀಶ್, ಬೇಗೂರು ವೃತ್ತ ನೀರಿಕ್ಷಕ ಕಿರಣ್ ಕುಮಾರ್, ಪಿ.ಎಸ್.ಐ ಚರಣ್ ಗೌಡ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!