Mysore
34
few clouds

Social Media

ಶನಿವಾರ, 11 ಏಪ್ರಿಲ 2026
Light
Dark

ಶಾರುಖ್ ಖಾನ್ ‘ಪಠಾಣ್’ ಚಿತ್ರ ಸೆಪ್ಟೆಂಬರ್ 1 ರಂದು ಜಪಾನ್‌ನಲ್ಲಿ ಬಿಡುಗಡೆ

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ  ಬ್ಲಾಕ್‌ಬಸ್ಟರ್ ಚಿತ್ರ ಪಠಾಣ್ ಸೆಪ್ಟೆಂಬರ್ 1 ರಂದು ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಬುಧವಾರ ತಿಳಿಸಿದ್ದಾರೆ.

ಕಳೆದ ಜನವರಿ 25 ರಂದು ಭಾರತೀಯ ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದ ಆಕ್ಷನ್-ಥ್ರಿಲ್ಲರ್ ಪಠಾಣ್ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ.

“ಪಠಾಣ್ ಚಿತ್ರ ಜಪಾನ್‌ನಲ್ಲಿ ಸೆಪ್ಟೆಂಬರ್ 1, 2023 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ” ಎಂದು ಯಶ್ ರಾಜ್ ಫಿಲ್ಮ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ತಿಂಗಳು, ಆರ್ಮೇನಿಯಾ, ಅಜೆರ್ಬೈಜಾನ್, ಬೆಲಾರಸ್, ಜಾರ್ಜಿಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ಮತ್ತು ಉಜ್ಬೇಕಿಸ್ತಾನ್ ಸೇರಿದಂತೆ ಸುಮಾರು 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪಠಾಣ್ ಬಿಡುಗಡೆಯಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!