Mysore
19
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಹುಣಸೂರು‌ ಬಿಜೆಪಿ‌ ಅಭ್ಯರ್ಥಿ ದೇವರಳ್ಳಿ ಸೋಮಶೇಖರ್‌ಗೆ ಪಿತೃ ವಿಯೋಗ

ಮೈಸೂರು : ಹುಣಸೂರು‌ ಬಿಜೆಪಿ‌ ಅಭ್ಯರ್ಥಿ ದೇವರಳ್ಳಿ ಸೋಮಶೇಖರ್ ತಂದೆ ಅಣ್ಣೇಗೌಡ ಇಂದು ನಿಧನರಾಗಿದ್ದಾರೆ.
ಅಣ್ಣೇಗೌಡ ಅವರು ವಯೋಸಹಜ‌ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅಣ್ಣೇಗೌಡ ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಸ್ವ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ದೇವರಳ್ಳಿ ಸೋಮಶೇಖರ್ ಅವರು ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ದೇವರಳ್ಳಿ ಸೋಮಶೇಖರ್ ಅವರು ಈ ಬಾರಿ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!