Mysore
24
scattered clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಕಣಿವೆಗೆ ಉರುಳಿದ ಬಸ್ : 12 ಮಂದಿ ಸಾವು

ಮುಂಬೈ : ಕಣಿವೆಗೆ ಬಸ್ ಉರುಳಿ 12 ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ. ಅಪಘಾತದಲ್ಲಿ 25 ಮಂದಿ ಗಾಯಗೊಂಡಿದ್ದಾರೆ.
ಲೋನಾವಾಲಾ ಬಳಿಯ ಖಂಡಾಲ ಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಣಿವೆಗೆ ಉರುಳಿದೆ. ಅಪಘಾತಕ್ಕೀಡಾದ ಬಸ್ ಮುಂಬೈನಿಂದ ಪುಣೆಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ.
ಲಭ್ಯವಿರುವ ಮಾಹಿತಿ ಪ್ರಕಾರ, ಬೆಳಗಿನ ಜಾವ 4:30ರ ಸುಮಾರಿಗೆ ಖಂಡಾಲ ಘಾಟ್‌ನ ಶಿಂಡ್ರೋಬಾ ದೇವಾಲಯದ ಬಳಿ ಡ್ರೈವರ್ ನಿಯಂತ್ರಣ ಕಳೆದುಕೊಂಡ ಬಸ್ ತಡೆಗೋಡೆ ಗುದ್ದಿ 500 ಅಡಿ ಆಳದ ಕಣಿವೆಗೆ ಉರುಳಿದೆ.ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!