Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಅಸ್ಸಾಂನಲ್ಲಿ 14,300 ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡಿದ ಮೋದಿ

ಗುವಾಹಟಿ – ಬಿಹು ನೃತ್ಯ ಪ್ರದರ್ಶನದ ವೀಕ್ಷಣೆಗಾಗಿ ಆಸ್ಸಾಂಗೆ ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 14.300 ಕೋಟಿ ರೂ.ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಬಿಹು ನೃತ್ಯಗಾರರು ಮಾಡುವ ವರ್ಣರಂಜಿತ ಕಾರ್ಯಕ್ರಮದ ವೀಕ್ಷಣೆಗೆ ಅಸ್ಸಾಂಗೆ ಆಗಮಿಸಿರುವ ಮೋದಿ ಅವರನ್ನು ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಸ್ವಾಗತಿಸಿದರು.

ಬ್ರಹ್ಮಪುತ್ರದ ಬಾರ್ಡ್ ಡಾ ಭೂಪೇನ್ ಹಜಾರಿಕಾ ಅವರ ಈ ಅಮರ ಹಾಡು ಪ್ರತಿಯೊಬ್ಬ ಅಸ್ಸಾಮಿ ಜನರ ಭಾವನೆಯನ್ನು ಪ್ರತಿಧ್ವನಿಸುತ್ತದೆ. ಬಿಹುವನ್ನು ಆಚರಿಸಲು ನಾನು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ ಅವರನ್ನು ಅಸ್ಸಾಂಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಅಸ್ಸಾಂ ಸಿಎಂ ಬಿಸ್ವಾ ಟ್ವೀಟ್ ಮಾಡಿದ್ದಾರೆ.‌

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು 14,300 ಕೋಟಿ ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಮ್ರೂಪ್‍ನಲ್ಲಿ 500 ಟಿಪಿಡಿ ಮೆಂಥಾಲ್ ಸ್ಥಾವರದ ಕಾರ್ಯಾರಂಭ, ಪಲಾಶ್ಬರಿ ಮತ್ತು ಸುಲ್ಕುಚಿಯನ್ನು ಸಂಪರ್ಕಿಸುವ ಬ್ರಹ್ಮಪುತ್ರ ನದಿಯ ಮೇಲಿನ ಸೇತುವೆ ಮತ್ತು ರಂಗ್ ಘರ್, ಶಿವಸಾಗರದ ಸೌಂದರ್ಯೀಕರಣ ಕಾಮಗಾರಿಗಳು ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳು ಲೋಕಾರ್ಪಣೆಗೊಳ್ಳಲಿವೆ.

ಇದೇ ಸಂದರ್ಭದಲ್ಲಿ ಮೋದಿ ಅವರು ಅಸ್ಸಾಂ ಅಡ್ವಾನ್ಸ್‍ಡ್ ಹೆಲ್ತ್ ಕೇರ್ ಇನ್ನೋವೇಶನ್ ಇನ್ಸ್ಟಿಟ್ಯೂಟ್‍ಗೆ ಅಡಿಪಾಯವನ್ನು ಹಾಕುತ್ತಾರೆ ಮತ್ತು ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಕಾರ್ಡ್‍ಗಳನ್ನು ವಿತರಿಸುವ ಮೂಲಕ ‘ಆಪ್ಕೆ ದ್ವಾರ ಆಯುಷ್ಮಾನ್’ ಅಭಿಯಾನಕ್ಕೂ ಚಾಲನೆ ನೀಡಲಿದ್ದಾರೆ.
ರೊಂಗಾಲಿ ಬಿಹುವನ್ನು ಪ್ರತಿ ವರ್ಷ ಬೋಹಾಗ್ ತಿಂಗಳ ಮೊದಲ ವಾರದಲ್ಲಿ (ಏಪ್ರಿಲ್ ಮಧ್ಯದಲ್ಲಿ) ಆಚರಿಸಲಾಗುತ್ತದೆ, ರೊಂಗಾಲಿ ಅಥವಾ ಬೋಹಾಗ್ ಬಿಹು ಅಸ್ಸಾಮಿ ಹೊಸ ವರ್ಷವನ್ನು ಘೋಷಿಸುತ್ತದೆ ಮತ್ತು ಸಮುದಾಯದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ