ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಸಿಕಂದರಬಾದ್ ಹಾಗೂ ತಿರುಪತಿ ನಡುವಿನ ವಂದೇ ಭಾರತ್ ರೈಲಿಗೆ ಶನಿವಾರ ಚಾಲನೆ ನೀಡಿದರು.
ತಿರುಪತಿ ಯಾತ್ರಾತ್ರಿಗಳಿಗೆ ಉಪಯೋಗವಾಗಲೆಂದು ಸಿಕಂದರಬಾದ್–ತಿರುಪತಿ ನಡುವೆ ವಂದೇ ಭಾರತ್ ರೈಲು ಯೋಜನೆಯನ್ನು ಮೂರು ತಿಂಗಳ ಅಲ್ಪಾವಧಿಯಲ್ಲಿ ನಿರ್ಮಿಸಲಾಗಿದೆ.
ಈ ಯೋಜನೆಗೆ ಸುಮಾರು ₹720 ಕೋಟಿಯನ್ನು ಕೇಂದ್ರ ಸರ್ಕಾರ ವೆಚ್ಚ ಮಾಡಿದೆ.
ವಂದೇ ಭಾರತ್ ರೈಲು ಯೋಜನೆಯಿಂದಾಗಿ ಸಿಕಂದರಬಾದ್ ಹಾಗೂ ತಿರುಪತಿ ನಡುವಿನ ಪ್ರಯಾಣದ ಅವಧಿ ಮೂರುವರೆ ಗಂಟೆ ಕಡಿಮೆಯಾಗಲಿದೆ.
ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಕಂದರಬಾದ್ ಹಾಗೂ ವಿಶಾಖಪಟ್ಟಣ ನಡುವಿನ ವಂದೇ ಭಾರತ್ ರೈಲನ್ನು ಲೋಕಾರ್ಪಣೆ ಮಾಡಿದ್ದರು.





