Mysore
23
broken clouds

Social Media

ಶುಕ್ರವಾರ, 02 ಅಕ್ಟೋಬರ್ 2026
Light
Dark

IPL | ಕಾಲಿಗೆ ಗಾಯ ಮಾಡಿಕೊಂಡ ಧೋನಿ ಅಭ್ಯಾಸದಿಂದ ದೂರ: ಗುಜರಾತ್ ವಿರುದ್ಧ ಆಡುವರೇ?

ಅಹಮದಾಬಾದ್‌: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಎಡ ಮೊಣಕಾಲಿಗೆ ಗಾಯವಾಗಿದ್ದು, ಶುಕ್ರವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿರುವ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಅವರು ಆಡುವರೇ ಎಂಬುದರ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.

ಆದರೆ, ಇಂದಿನ ಪಂದ್ಯದಲ್ಲಿ ಧೋನಿ ಇರಲಿದ್ದಾರೆ ಎಂದಿರುವ ತಂಡದ ಸಿಇಒ ಅಭಿಮಾನಿಗಳ ದುಗುಡ ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.

‌41ರ ಹರೆಯದ ಭಾರತ ತಂಡದ ಮಾಜಿ ನಾಯಕ ಚೆನ್ನೈನಲ್ಲಿ ನಡೆದ ತರಬೇತಿ ವೇಳೆ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಗುರುವಾರ ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸದಲ್ಲಿ ಅವರು ಪಾಲ್ಗೊಳ್ಳಲಿಲ್ಲ.

ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್‌ ಅವರನ್ನು ಈ ಬಗ್ಗೆ ಕೇಳಿದಾಗ, ‘ನನ್ನ ಮಟ್ಟಿಗೆ, ಧೋನಿ ಆಡುವುದು ಶೇ 100 ರಷ್ಟು ಖಚಿತ. ಬೇರೆ ಯಾವುದೇ ಬೆಳವಣಿಗೆಯ ಬಗ್ಗೆ ನನಗೆ ತಿಳಿದಿಲ್ಲ’ ಎಂದು ಹೇಳಿದರು.

ಒಂದು ವೇಳೆ ಧೋನಿ ಆಡದಿದ್ದಲ್ಲಿ, ಡೆವೊನ್ ಕಾನ್ವೇ ಅಥವಾ ಅಂಬಟಿ ರಾಯುಡು ಅವರಲ್ಲಿ ಒಬ್ಬರು ವಿಕೆಟ್ ಕೀಪರ್‌ ಆಗಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!