Mysore
15
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ನಿರ್ಮಾಲಾನಂದ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿದ್ದ ಅಡ್ಡಂಡ ಮೇಲೆ ಒಕ್ಕಲಿಗ ಸಮುದಾಯದ ಕಿಡಿ : ರಂಗಾಯಣ ಮುತ್ತಿಗೆಗೆ ಯತ್ನ

ಮೈಸೂರು : ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿಕೆಯನ್ನ ಖಂಡಿಸಿ ಒಕ್ಕಲಿಗ ಸಮುದಾಯದಿಂದ ರಂಗಾಯಣ ಮುತ್ತಿಗೆಗೆ ಯತ್ನಿಸಲಾಯ್ತು.
ನಿರ್ಮಲಾನಂದನಾಥ ಸ್ವಾಮೀಜಿ ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ ಎಂದಿದ್ದ ಕಾರ್ಯಪ್ಪ ಹೇಳಿಕೆಗೆ ಒಕ್ಕಲಿಗ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು,ಇಂದು ಒಕ್ಕಲಿಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿ ಮೈಸೂರಿನ ರಂಗಾಯಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.ಮುನ್ನೆಚ್ಚರಿಕಾ ಕ್ರಮವಾಗಿ ಪೋಲೀಸರು ರಂಗಾಯಣದ ಎಲ್ಲಾ ಗೇಟ್‌ ಗಳನ್ನೂ ಬಂದ್‌ ಮಾಡಿದ್ದರು,ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಪೋಲಿಸರ ಜೊತೆ ಮಾತಿನ ಚಕಮಕಿ ನಡೆಸಿದರು.ಇನ್ನು ಅಡ್ಡಂಡ ಕಾರ್ಯಪ್ಪ ವಿರುದ್ಧ ವಿವಿಧ ಧಿಕ್ಕಾರದ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಪೋಲಿಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದುಕೊಂಡರು.
ಕಾರ್ಯಪ್ಪ ಶ್ರೀಗಳ ಬಗ್ಗೆ ಹೇಳಿದ್ದೇನು ?


“ಅವರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ. ಬೇರೆ ಜಾತಿಗಳಿಗೆ ಅಲ್ಲ.ಒಕ್ಕಲಿಗ ಸಮುದಾಯ ರಕ್ಷಣೆ ಮಾಡುವುದು ಅವರ ಕೆಲಸ.ಹಾಗಂತ ಉರಿಗೌಡ,ನಂಜೇಗೌಡ ಕುರಿತು ಚರ್ಚೆ ನಡೆಯಲೇ ಬಾರದು ಅಂತಾ ಹೇಳಿದ್ದು ಸರಿಯಲ್ಲ” ಸ್ವಾಮೀಜಿಗಳು ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತರು.ಆಗಾಗ ಡಿಕೆಶಿ ಅವರನ್ನ ಕರೆದು ಕುಮಾರಸ್ವಾಮಿ ನಮ್ಮವ,ಅವರ ಸರ್ಕಾರ ಬೀಳದಂತೆ ನೋಡಿಕೊ ಎಂದು ಹೇಳಿದ್ದರು.ಅವರಿಗೆ ಕುಮಾರಸ್ವಾಮಿ,ಡಿಕೆಶಿ ಮಾತ್ರ ಒಕ್ಕಲಿಗ ನಾಯಕರು,ಸಿ.ಟಿ.ರವಿ,ಅಶ್ವತ್‌ ನಾರಾಯಣ್‌ ಅವರೆಲ್ಲ ಅದೇ ಸಮುದಾಯದವರಾದರೂ ಸ್ವಾಮೀಜಿಗೆ ಬೇಕಿಲ್ಲ ಎಂದಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!