ಕೊಳ್ಳೇಗಾಲ: ಇಕ್ಕಡಹಳ್ಳಿ ಬಳಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಪೊಲೀಸರು ಪ್ರಕರಣ ಭೇದಿಸಿದಾಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬುದು ತಿಳಿದುಬಂದಿದೆ.
ಬೆಂಗಳೂರಿನ ಹುಳಿಮಾವು ಶ್ವೇತಾ (35) ಕೊಲೆಯಾದ ಮಹಿಳೆ. ಈಕೆಗೆ ಮದುವೆಯಾಗಿದ್ದು ಗಂಡನನ್ನು ತೊರೆದು ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರಿಯಕರನ ಜತೆ ಭಾನುವಾರ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ.
ಈ ಬಗ್ಗೆ ಈಕೆಯ ಸಂಬಂಧಿಕರ ಜೊತೆ ಪೊಲೀಸರು ವಿಚಾರಣೆ ನಡೆಸಿದ್ದು, ಶೀಘ್ರದಲ್ಲಿ ವಿವರವನ್ನು ತಿಳಿಸಲಾಗುವುದು ಎಂದು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.





