Mysore
23
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮೈಸೂರು : ನೂತನವಾಗಿ ಎಸ್‌ಪಿ ಜನಸಂಪರ್ಕ ಸಭೆ

ಮೈಸೂರು : ಕಾನೂನು ಉಲ್ಲಂಘನೆ ಮಾಡದೇ ಪೊಲೀಸರೊಂದಿಗೆ ಸಹಕಾರ ನೀಡುವಂತೆ ಎಸ್ ಪಿ ಮನವಿ ಮೈಸೂರು ಗ್ರಾಮಾಂತರ ಉಪವಿಭಾಗ ವ್ಯಾಪ್ತಿಯ ಆರು ಪೊಲೀಸ್ ಠಾಣೆ ಒಳಗೊಂಡಂತೆ ನಗರದ ಡಿ ಆರ್ ಸಭಾಂಗಣದಲ್ಲಿ ನೂತನವಾಗಿ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿದರು ನಂತರ ಮಾತನಾಡಿದ ಅವರು

ಸಾರ್ವಜನಿಕರು ಕಾನೂನನ್ನು ಉಲ್ಲಂಘನೆ ಮಾಡದೇ ಪೊಲೀಸರೊಂದಿಗೆ ಸಹಕಾರ ನೀಡಬೇಕು,ಪೊಲೀಸ್ ಠಾಣೆಗಳು ಹೆಚ್ಚು ಜನಸ್ನೇಹಿ ಆಗಿದ್ದು ಮದ್ಯವರ್ತಿಗಳಿಲ್ಲದೇ ಭಯ ಪಡದೇ ಠಾಣೆಗೆ ಬಂದು ತಮಗಾಗಿರುವ ನೋವುಗಳ ಬಗ್ಗೆ ದೂರನ್ನು ನೀಡಬಹುದು ಎಂದು ತಿಳಿಸಿದರು, ಅಲ್ಲದೇ ಸಾರ್ವಜನಿಕರು ತಮ್ಮ ದೂರು ನೀಡಿದಾಗ ನಮ್ಮ ಸಿಬ್ಬಂದಿಯವರು ಸತಾಯಿಸಿದರೆ ನಮಗೆ ಮಾಹಿತಿ ನೀಡಿದಲ್ಲಿ ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮಹಿಳೆಯರು ಮಕ್ಕಳ ಮೇಲೆ ಕೌಟುಂಬಿಕವಾಗಿ ಔದ್ಯೋಗಿಕ ಸ್ಥಳಗಳಲ್ಲಿ ಶಾಲಾಕಾಲೇಜುಗಳಲ್ಲಿ ಯಾವುದೇ ರೀತಿಯ ಶೋಷಣೆ ದೌರ್ಜನ್ಯ ದೈಹಿಕ ಮತ್ತು ಮಾನಸಿಕ ಹಿಂಸೆಗೊಳಪಡಿಸುವುದು, ಮಹಿಳಾ ಸಾಂತ್ವನ ಹೆಸರಲ್ಲಿ ನೊಂದವರ ಬಳಿ ವಿವಿಧ ಬೇಡಿಕೆ ಇಡುವವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ, ಇತ್ತಿಚಿನದಿನಗಳಲ್ಲಿ ಸೈಬರ್‌ಅಪರಾಧಗಳು ಹೆಚ್ಚಾಗಿದ್ದು ಗ್ರಾಮೀಣ ಭಾಗದ ಜನರೂ ಸಹ ವಂಚಕ ಕರೆಗಳ ಆಮಿಷಗಳಿಗೆ ಒಳಾಗಾಗಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಅಂತಹ ಸಮಯದಲ್ಲಿ 1930 ಸಹಾಯವಾಣಿಯನ್ನು ಬಳಸಿಕೊಳ್ಳುವಂತೆ ಸೂಚಿಸಿದರು,112 ಸಹಾಯವಾಣಿ ತುರ್ತು ಸಂದರ್ಭದಲ್ಲಿ ಜನರ ಸೇವೆಗೆ ಲಭ್ಯವಿದ್ದು ಗ್ರಾಮೀಣ ಭಾಗದಲ್ಲಿರುವ ಜನತೆಯು ಸದುಪಗಪಯೋಡೆದಕೊಳ್ಳುವಂತೆ ಸೂಚಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ