ಅಬುಧಾಬಿ: ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಇಂಜಿನ್ ವಿಫಲವಾಗಿದ್ದರಿಂದ ಏರ್ ಇಂಡಿಯಾ ವಿಮಾನವೊಂದು ಇಲ್ಲಿನ ಏರ್‌ಪೋರ್ಟ್‌ನಲ್ಲಿ ಶುಕ್ರವಾರ ತುರ್ತು ಲ್ಯಾಂಡ್ ಆಗಿದೆ. ಈ ವಿಮಾನವು ಅಬುಧಾಬಿಯಿಂದ ಕೋಯಿಕ್ಕೋಡ್‌ಗೆಹೊರಟಿತ್ತು. ಟೇಕಾಫ್ ಆಗಿ 1000 ಅಡಿ ಎತ್ತರ ಹಾರಿದ ಬಳಿಕ ಈ ಘಟನೆ ನಡೆದಿದೆ. ವಿಮಾನದಲ್ಲಿ ಅಗ್ನಿ ಕಾಣಿಸಿಕೊಂಡಿದ್ದರಿಂದ ತುರ್ತು ಭೂಸ್ಪರ್ಶ ಮಾಡಲಾಗಿತ್ತು ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿತ್ತು. ಇಂಜಿನ್ ವಿಫಲವಾಗಿದ್ದರಿಂದ ಈ ರೀತಿ ಮಾಡಬೇಕಾಯಿತು ಎಂದು ಮೂಲಗಳು ಖಚಿತಪಡಿಸಿವೆ. 184 ಪ್ರಯಾಣಿಕರಿದ್ದ ಬೋಯಿಂಗ್ 737-800 ವಿಮಾನದಲ್ಲಿ ಈ ದೋಷ ಕಂಡು ಬಂದಿದ್ದು, ಎಲ್ಲಾ ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ ಎಂದು ವಿಮಾನ ಸಂಸ್ಥೆಯ ವಕ್ತಾರ ಪ್ರತಿಕ್ರಿಯಿಸಿದ್ದಾರೆ.





