Mysore
21
scattered clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಸ್ಯಾಂಟ್ರೋ ರವಿ ಯಾರೆಂದೂ ಗೊತ್ತಿಲ್ಲ : ಸಿ.ಟಿ. ರವಿ

ಮೈಸೂರು: ನಾನು ಸಿ.ಟಿ.ರವಿ, ಸ್ಯಾಂಟ್ರೋ ರವಿ ಯಾರೆಂದೂ ಗೊತ್ತಿಲ್ಲ.ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದರು.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ‘‘ಈಗ ಯಾರು ಎಲ್ಲಿ ಬೇಕಾದರೂ, ಯಾರ ಜತೆಗೆ ಬೇಕಾದರೂ ಫೋಟೋ ತೆಗೆಸಿಕೊಳ್ಳುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇರುವವರು ಹೋದ ಕಡೆ ಎಲ್ಲ ಸೆಲ್ಛಿಗೆ ಫೋಸ್ ಕೊಟ್ಟಿರುತ್ತಾರೆ. ಹಾಗೆಂದ ಮಾತ್ರಕ್ಕೆ ಫೋಟೋ ತೆಗೆಸಿಕೊಂಡವರ ಜತೆಗೆಲ್ಲ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದರು. ಸಾರ್ವಜನಿಕರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿದ ಐಎಂಎ ಹಗರಣದ ಎ ಒನ್ ಆರೋಪಿ ಜತೆ ಕುಮಾರಸ್ವಾಮಿ ಫೋಟೋ ತೆಗೆಸಿಕೊಂಡಿದ್ದಾರೆ. ಹಾಗೆಂದು ಕುಮಾರಸ್ವಾಮಿ ಅವರನ್ನು ಐಎಂಎ ಹಗರಣದ ಎ ಟು ಆರೋಪಿ ಎನ್ನಲು ಸಾಧ್ಯವೇ ಎಂದು ಖಾರವಾಗಿ ಪ್ರಶ್ನಿಸಿದರು.
ಹಲವು ಸಚಿವರು, ಶಾಸಕರು ತಮಗೆ ಸಂಬಂಧಿಸಿದ ಆಕ್ಷೇಪಾರ್ಹ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸದಂತೆ ನ್ಯಾಯಾಲಯದಿಂದ  ತಡೆಯಾಜ್ಞೆ ತಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ‘‘ಪ್ರತಿಪಕ್ಷ ನಾಯಕರೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ ಯಾವ್ಯಾವ ವಿಚಾರಕ್ಕೆ ತಡೆಯಾಜ್ಞೆ ತಂದಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!