Mysore
21
overcast clouds

Social Media

ಭಾನುವಾರ, 23 ಆಗಸ್ಟ್ 2026
Light
Dark

ಸಿಯಾಚಿನ್‌ : ಮೊದಲ ಬಾರಿಗೆ ಮಹಿಳಾ ಸೇನಾ ಅಧಿಕಾರಿ ನಿಯೋಜನೆ

ನವದೆಹಲಿ: ಜಗತ್ತಿನ ಎತ್ತರದ ಯುದ್ಧಭೂಮಿ ಎಂದೇ ಕರೆಯಲಾಗುವ ಸಿಯಾಚಿನ್‌ನ ನೀರ್ಗಲ್ಲಿನಲ್ಲಿ ಇದೇ ಮೊದಲ ಬಾರಿಗೆ ಸೇನೆಯು ಮಹಿಳಾ ಅಧಿಕಾರಿಯನ್ನು ನಿಯೋಜನೆ ಮಾಡಿದೆ.

ಕಾರ್ಪ್ಸ್‌ ಆಫ್ ಎಂಜಿನಿಯರ್ಸ್‌ನ ಕ್ಯಾಪ್ಟನ್ ಶಿವಾ ಚೌಹಾನ್ ಅವರನ್ನು, 15,600 ಅಡಿ ಎತ್ತರದಲ್ಲಿರುವ ಕುಮಾರ್‌ ಪೋಸ್ಟ್‌ನಲ್ಲಿ ಸೋಮವಾರ ನಿಯೋಜನೆ ಮಾಡಲಾಗಿದೆ.

‘ಮೂರು ತಿಂಗಳು ಕಾಲ ಕಠಿಣ ತರಬೇತಿ ನೀಡಿದ ನಂತರ ಕ್ಯಾಪ್ಟನ್ ಚೌಹಾನ್ ಅವರನ್ನು ಸಿಯಾಚಿನ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸುವ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!