Mysore
21
overcast clouds

Social Media

ಭಾನುವಾರ, 26 ಜುಲೈ 2026
Light
Dark

ನಾಳೆಯಿಂದ ವಿಶಿಷ್ಟ ಲೈಂಗಿಕತೆ ಸಮುದಾಯಗಳ ಸಮಾವೇಶ

ಚಾಮರಾಜನಗರ: ಸಾರಥ್ಯ ಸಂಘಟನೆಗಳ ಒಕ್ಕೂಟದಿಂದ ವಿಶಿಷ್ಟ ಲೈಂಗಿಕತೆ ಗುರುತಿಸುವಿಕೆಯ ಸಮುದಾಯಗಳ ೧೧ನೇ ವರ್ಷದ ರಾಜ್ಯ ಮಟ್ಟದ ಸಮಾವೇಶವನ್ನು ಡಿ.೨೧ ಮತ್ತು ೨೨ ರಂದು ನಗರದ ಡಾ.ರಾಜಕುಮಾರ್ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಆತ್ಮಗೌರವ ಮತ್ತು ಘನತೆಯ ಬದುಕು ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಈ ಸಮಾವೇಶವನ್ನು ಸಾರಥ್ಯ, ಸಮತಾ ಸೊಸೈಟಿ ಮತ್ತು ಪಯಣ ಸಂಸ್ಥೆಗಳು ಜೊತೆಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ತ್ರಿವಿಕ್ರಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ ೧೧.೩೦ ಗಂಟೆಗೆ ಸಮಾವೇಶವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಎಸ್. ಹೊನ್ನಸ್ವಾಮಿ, ಎಂ.ಶ್ರೀಧರ್ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸಾರಥ್ಯ ಒಕ್ಕೂಟವು ಕಳೆದ ೧೧ ವರ್ಷದಿಂದ ಕರ್ನಾಟಕದ ೨೫ ಜಿಲ್ಲೆಗಳ ಸಮುದಾಯ ಸಂಘಟನೆಗಳ ಜೊತೆ ಕಾರ್ಯ ನಿರ್ವಹಿಸುತ್ತಿದೆ. ವಿಶಿಷ್ಟ ಲೈಂಗಿಕತೆಯ ಕೋಥಿ, ಡಿಡಿ, ಬೈಸೆಕ್ಸೂವಲ್ (ದ್ವಿಲಿಂಗ ಕಾಮಿ) ಸಮುದಾಯಗಳನ್ನು ಗುರುತಿಸುವಿಕೆಯ ಕೆಲಸ ಮಾಡುತ್ತಿದೆ ಎಂದರು.
ಈ ಸಮುದಾಯಗಳನ್ನು ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುವುದು. ಗೌರವದಿಂದ ಬದುಕಲು ಪೂರಕ ವಾತಾವರಣ ನಿರ್ಮಿಸುವುದು ಸಾರಥ್ಯ ಉದ್ದೇಶವಾಗಿದೆ. ಸಮಾವೇಶಕ್ಕೆ ೫ ಜಿಲ್ಲೆಗಳಿಂದ ಸುಮಾರು ೧೫೦ ವಿಶಿಷ್ಟ ಲೈಂಗಿಕತೆ ಸಮುದಾಯದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಸಮುದಾಯಕ್ಕೆ ಸಂಬಂಧಿಸಿದಂತೆ ಒತ್ತಾಯದ ಮದುವೆ, ಗುರುತಿಸಿಕೊಳ್ಳುವಿಕೆ, ಸವಾಲುಗಳು ಮತ್ತು ಕಾನೂನುಗಳು ಈ ವಿಷಯಗಳ ಚರ್ಚೆ ಸಂವಾದ ಮತ್ತು ಸಾಂಸಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಡಿ.೨೨ ರಂದು ಚಾಮರಾಜೇಶ್ವರ ದೇವಸ್ಥಾನದಿಂದ ಡಾ.ರಾಜಕುಮಾರ್ ಕಲಾ ಮಂದಿರದವರೆಗೆ ಸಮುದಾಯದ ನಡೆ ಸಾರಥ್ಯ ಸಮತಾ ಕಡೆಗೆ” ಎಂಬ ಶೀರ್ಷಿಕೆಯಲ್ಲಿ ಕಾಲ್ನಡಿಗೆ ಜಾಥಾ ವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಗೋಷ್ಠಿಯಲ್ಲಿ ಒಕ್ಕೂಟದ ದೀಪಾ ಬುದ್ದೆ, ಚಾಂದಿನಿ, ಆದಿತ್ಯ, ಚಾಂದಿನಿ, ಮಹಮ್ಮದ್ ಸೈಪುಲ್ಲಾ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!