Mysore
24
overcast clouds

Social Media

ಬುಧವಾರ, 17 ಜೂನ್ 2026
Light
Dark

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕೆ ಶಿಪ್ ಸೂಪರ್ವೈಸರ್ ಸಾವು

ಹನೂರು : ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದಕೆ ಶಿಪ್ ಸೂಪರ್ವೈಸರ್   ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಧಾರವಾಡದ ಸೆಳವಾಡಿ ಗ್ರಾಮದ ಮೂಲದ ಶ್ರೀಶೈಲ್ ( 26) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಪಟ್ಟಣದ ಜಡೇಸ್ವಾಮಿ ಎಂಬವರಿಗೆ ಸೇರಿದ ಲಾರಿ ಮಂಡ್ಯದ ಸಕ್ಕರೆ ಕಾರ್ಖಾನೆಯಿಂದ ಸಕ್ಕರೆ ತುಂಬಿಕೊಂಡು ಬರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಕೇಶಿಫ್ ರಸ್ತೆ ಕಾಮಗಾರಿಗೆ ಬಳಸುತ್ತಿದ್ದ ಟಿಪ್ಪರ್ ನ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಟಿಪ್ಪರ್ ಹಾಗೂ ಲಾರಿ ಜಖಂ ಗೊಂಡಿದ್ದು ಟಿಪ್ಪರ್ ವಾಹನದ ಎಡಬದಿಯಲ್ಲಿ ಕುಳಿತಿದ್ದ ಕೆ ಶಿಪ್ ಸೂಪರ್ವೈಸರ್ ಎರಡು ವಾಹನದ ಮಧ್ಯೆ ಸಿಲುಕಿಕೊಂಡಿದ್ದರು ನಂತರ ಸಾರ್ವಜನಿಕರು ಸಹಕಾರದಿಂದ ವಾಹನದಿಂದ ರಕ್ಷಿಸಿದ್ದಾರೆ. ಆದರೂ ಸಹ ಕ್ಲೀನರ್ ನ ಎಡ ಕೈ ಕಟ್ಟಾಗಿ ಎದೆಯ ಭಾಗಕ್ಕೆ ಹೆಚ್ಚಿನ ಗಾಯವಾಗಿದ್ದರಿಂದ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!