ಶ್ರೀರಂಗಪಟ್ಟಣ: ಪಟ್ಟಣದ ರಂಗನಾಥನಗರದಲ್ಲಿ ಸಾರ್ವಜನಿಕರ ಸೇವೆಗಾಗಿ ಕರ್ನಾಟಕ ಸರ್ಕಾರದ ವತಿಯಿಂದ ತೆರೆಯಲಾಗಿರುವ ನಮ್ಮ ಕ್ಲಿನಿಕ್‌ಅನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣ ಪ್ರದೇಶದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಾಗೂ ದುರ್ಬಲ ವರ್ಗದವರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಸರ್ಕಾರ ಹಮ್ಮಿಕೊಂಡಿರುವ ನಮ್ಮ ಕ್ಲಿನಿಕ್ ಸಹಕಾರಿಯಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರರ್ಭದಲ್ಲಿ ತಹಸಿಲ್ದಾರ್ ಶ್ವೇತಾ ಎನ್.ರವೀಂದ್ರ, ತಾಪಂ ವೀಣಾ, ಆರೋಗ್ಯ ಇಲಾಖೆಯ ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಮೋಹನ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ಪುರಸಭೆ ಅಧ್ಯಕ್ಷರಾದ ನಿರ್ಮಲ ವೇಣುಗೋಪಾಲ್, ಮುಖ್ಯಾಧಿಕಾರಿ ಸಂದೀಪ್, ಪರಿಸರ ಅಭಿಯಂತರರಾದ ಸಹನಾ, ಆರೋಗ್ಯ ನಿರೀಕ್ಷಕರಾದ ರೇಖಾ, ಚಂಪ, ಪುರಸಭಾ ಸದಸ್ಯರಾದ ರಾಜು, ಕೃಷ್ಣಪ್ಪ, ಶ್ರೀನಿವಾಸ್, ಚೈತ್ರ, ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಡಾ. ನಾಗರಾಜು, ಡಾ.ಪ್ರಶಾಂತ್, ಪುಟ್ಟರಾಜು, ನಳಿನ ಸತ್ಯನಾರಾಯಣ, ನಮ್ಮ ಕ್ಲಿನಿಕ್‌ನ ವೈದ್ಯ ಡಾ.ಆನಂದ್, ಶುಶ್ರೂಷಕಿ ಕೋಮಲ, ಪ್ರಯೋಗ ಶಾಲಾ ತಂತ್ರಜ್ಞ ಹರೀಶ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಎಂ. ಮಹದೇವಮ್ಮ ಭಾಗವಹಿಸಿದ್ದರು.