Mysore
22
overcast clouds

Social Media

ಮಂಗಳವಾರ, 09 ಜೂನ್ 2026
Light
Dark

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಹಬ್ಬ ಮಾಡುವ ಮನಸಿದೆ: ಅಶೋಕ ಕಶ್ಯಪ್

ಮೈಸೂರು: ಮುಂದಿನ ವರ್ಷ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಹಬ್ಬವನ್ನು ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ ಕಶ್ಯಪ್ ತಿಳಿಸಿದರು.

ರಂಗಾಯಣದ ಈ ರಂಗೋತ್ಸವ ಕಾರ್ಯಕ್ರಮದಲ್ಲಿ ಸಿನಿಮಾಗೂ ಆದ್ಯತೆ ನೀಡುವ ಮೂಲಕ ಸಿನಿಮಾ ಕಲೆ, ಜ್ಞಾನವನ್ನು ತಿಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದರೇ ಅದಕ್ಕೆ ಒಂದು ಸಂಸ್ಥೆ ಇರಬೇಕು. ಕಲೆಯನ್ನು ಕಲಿಸುವ ಮತ್ತು ಬೆಳೆಸುವ ಕೆಲಸವನ್ನು ಈ ರಂಗಾಯಣ ಮಾಡುತ್ತಿದೆ. ನನಗೂ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಹಬ್ಬ ಆಚರಿಸುವ ಮನಸ್ಸಿದ್ದು, ಇದನ್ನು ಸರ್ಕಾರದ ಮುಂದಿಡುವೆ ಎಂದರು.
ಪ್ರಕೃತಿ ಪ್ರಿಯವಾಗಲಿ: ಪ್ರಕೃತಿ ನನಗೆ ಬದುಕಿನ ಭರವಸೆ ನೀಡಿದೆ.ಅವರ ಮುಂದೆ ನಾವೆಲ್ಲ ಸಣ್ಣವರು. ನನಗೆ ಕ್ಯಾನ್ಸರ್ ಇತ್ತು. ವೈದ್ಯರು ಎರಡು ವರ್ಷ ಇರುತ್ತೀರಾ. ಪ್ರಕೃತಿ ಮಡಿಲಿನಲ್ಲಿ ಸಮಯ ಕಳೆಯಿರಿ ಎಂದರು. ನಾನು ತೀರ್ಥಹಳ್ಳಿ ಕಡೆ ಹೋಗಿ ಮನೆ ಮಾಡಿದೆ. ಈಗ ಹದಿನೇಳು ವರ್ಷ ಬದುಕಿದ್ದೀನಿ. ಪ್ರಕೃತಿ, ಹಸಿರನ್ನು ಎಲ್ಲರೂ ಅಪ್ಪಿಕೊಳ್ಳಬೇಕು, ಅದನ್ನು ಕಾಪಾಡಿಕೊಳ್ಳಬೇಕು ಎಂದರು.

ಸಿನಿಮಾ ಪ್ರದರ್ಶನ

ಬಹುರೂಪಿ ಚಲನಚಿತ್ರೋತ್ಸವದ ಮೊದಲ ದಿನವಾದ ಶುಕ್ರವಾರ ಉಮೇಶ್ ಅಗರ್‌ವಾಲ್ ನಿರ್ದೇಶನದ ಜೈ ಹೋ-ಎ ಫಿಲ್ಮ್ ಎ.ಆರ್.ರೆಹಮಾನ್ ಹಿಂದಿ ಚಿತ್ರ ಮತ್ತು ಟ್ರೆಸಿಂಗ್ ರೈತರ್ ಶೆರ್ಪಾ ಅವರ ನಿರ್ದೇಶನದ ಕರ್ಮ ಎಂಬ ನೇಪಾಳಿ ಚಿತ್ರಗಳನ್ನು ಪುನೀತ್ ರಾಜ್ ಕುಮಾರ್ (ಶ್ರೀರಂಗ ರಂಗಮಂದಿರ) ಅವರ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು. ಜೈ ಹೋ-ಎ ಫಿಲ್ಮ್ ಎ.ಆರ್.ರೆಹಮಾನ್ ಚಿತ್ರ ವೀಕ್ಷಣೆಗೆ ಇದ್ದಷ್ಟು ಪ್ರೇಕ್ಷಕರು ಮಧ್ಯಾಹ್ನದ ಕರ್ಮ ಚಿತ್ರ ನೋಡಲು ಇರಲಿಲ್ಲ. ಹೀಗಾಗಿ, ಮಧ್ಯಾಹ್ನ ಬಹುತೇಕ ಸೀಟುಗಳು ಖಾಲಿಯಿದ್ದವು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!