Mysore
23
light rain

Social Media

ಸೋಮವಾರ, 21 ಸೆಪ್ಟೆಂಬರ್ 2026
Light
Dark

ರೈಲಿಗೆ ಸಿಲುಕಿ ಜಿಂಕೆಗಳ ಸಾವು

ಮೈಸೂರು : ನಂಜನಗೂಡು ಸಮೀಪದ ಚಿನ್ನದಗುಡಿಹುಂಡಿಯ ಬಳಿ ರೈಲಿಗೆ ಸಿಲುಕಿ  7 ವರ್ಷದ ಎರಡು ಜಿಂಕೆಗಳು ಸಾವಿಗೀಡಾಗಿರುವ  ಘಟನೆ ನಡೆದಿದೆ.
ಮೈಸೂರಿನಿಂದ ಚಾಮರಾಜನಗರಕ್ಕೆ ಬೆಳಗ್ಗೆ ಬರುತ್ತಿದ್ದ ರೈಲಿಗೆ ವೀರನಪುರ ಅಥವಾ ಕಾರ್ಯ ಬೆಟ್ಟದಿಂದ್ದ ಜಿಂಕೆಗಳು ರೈಲಿಗೆ ಸಿಲುಕಿ ಸಾವನ್ನಪಿರುವ ಘಟನೆ ಬುಧವಾರ ನಡೆದಿದೆ.
ಜಿಂಕೆಗಳು ಮೃತಪಟ್ಟದನ್ನು ನೋಡಿದ ಗ್ರಾಮಸ್ಥರು ನಂಜನಗೂಡು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.
ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿ ನಂಜನಗೂಡಿನ ಪಶು ವೈದ್ಯರಿಂದ ಪರಿಕ್ಷೇ ನಡೆಸಿ ಮೃತ ಪಟ್ಟ ಜಿಂಕೆಗಳನ್ನು ಸುಟ್ಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!