Mysore
25
overcast clouds

Social Media

ಗುರುವಾರ, 30 ಜುಲೈ 2026
Light
Dark

ಹನೂರು : ಕ.ರ.ವೇ ತಾಲೂಕು ಘಟಕದ ಅಧ್ಯಕ್ಷರಾಗಿ ನೇಮತ್ ಪಾಷ ಆಯ್ಕೆ

ಹನೂರು : ನೆಲ ಜಲ ಭಾಷೆ ವಿಷಯವಾಗಿ ಒಗ್ಗಟ್ಟಾಗಿ ರಾಜ್ಯದ ಪ್ರತಿಯೊಬ್ಬ ನಾಗರಿಕರು ಹೋರಾಟ ನಡೆಸಬೇಕು ಎಂದು ಕನ್ನಡ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಹನೂರು ತಾಲೂಕು ಘಟಕದ ನೂತನ ಅಧ್ಯಕ್ಷ ನೇಮತ್ ಪಾಷಾ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ನಡೆದ ನೂತನ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡಿಗರು ಕೇವಲ ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವ ಆಚರಣೆ ಮಾಡಿ ಸುಮ್ಮನಾಗಬಾರದು ವರ್ಷದ ಎಲ್ಲಾ ದಿನಗಳಲ್ಲಿ ಕನ್ನಡ ಭಾಷಾಭಿಮಾನವನ್ನು ಎತ್ತಿ ತೋರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹನೂರು ತಾಲೂಕು ಘಟಕದ ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿಯಾಗಿ ಬಂಡಳ್ಳಿ ರಾಹುಲ್ ಬೇಗ್, ಉಪಾಧ್ಯಕ್ಷರಾಗಿ ಶಿವಕುಮಾರ್, ಸದಸ್ಯರಾಗಿ ತಾಜ್ ಸದ್ದಾಂ ಮುಸವಿರ್ ಕಾರ್ತಿಕ್ ಸೋಹಲ್ ನದೀಮ್ ಫಾರೂಕ್ ರಾಹುಲ್ ಸುಲೇಮಾನ್ ನಾಸಿರ್ ಯೂಸುಫ್ ರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಶಮಿ ಶರೀಫ್, ಅಧ್ಯಕ್ಷ ಆರ್ ಮೋಹನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಷಾ ಜಿಲ್ಲಾ ಸಂಸ್ಕೃತಿಕ ಘಟಕದ ಅಧ್ಯಕ್ಷ ಶಿವಕುಮಾರ್ ಉಪಾಧ್ಯಕ್ಷ ನಾಗೇಶ್ ನಾಯಕ್ ಅವಿನಾಶ್ ಉಪಾಧ್ಯಕ್ಷ ಅಯಾಜ್, ಪತ್ರಿಕ ಕಾರ್ಯದರ್ಶಿ ಮತಿನ್ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!