Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಫಲವತ್ತಾದ ಭೂಮಿ ಮೇಲೆ ಕಣ್ಣಿಟ್ಟ ಕೆಐಎಡಿಬಿ

ಹದಿನಾರು ಸೇರಿ 5 ಗ್ರಾಮಗಳ 1,037 ಎಕರೆ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ

ವರದಿ: ಕೆ.ಬಿ.ರಮೇಶನಾಯಕ

ಮೈಸೂರು: ರಾಜ್ಯದಲ್ಲಿ ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಉದ್ಯಮಿಗಳಿಗೆ ರತ್ನಗಂಬಳಿ ಹಾಸುತ್ತಿರುವ ರಾಜ್ಯ ಸರ್ಕಾರ, ಮೈಸೂರು ಜಿಲ್ಲೆುಂ ಇವ್ಮಾವು ಕೈಗಾರಿಕಾ ಪ್ರದೇಶದ ಎರಡನೇ ಹಂತದ ವಿಸ್ತರಣೆಗೆ ರೈತರ ಫಲವತ್ತಾದ ಕೃಷಿ ಭೂಮಿುಂನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಭೂ ಸ್ವಾಧೀನಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳು ಭೂ ಸ್ವಾಧೀನಕ್ಕೆ ಗುರುತಿಸಿರುವ ಹಳ್ಳಿಗಳ ನೂರಾರು ರೈತರು ತಮ್ಮ ಕೃಷಿ ಭೂಮಿ ಉಳಿಸಿಕೊಳ್ಳಲು ಹೋರಾಟಕ್ಕಿಳಿುಂಲು ಅಣಿಾಂಗಿದ್ದಾರೆ. ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ವಿರುದ್ಧ ರೈತರಲ್ಲಿ ಜಾಗೃತಿ ಮೂಡಿಸಲು ಮತ್ತು ಅಧಿಸೂಚನೆ ಕೈಬಿಡುವಂತೆ ಒತ್ತಾಯಿಸುವ ಸಲುವಾಗಿ ರೈತರು ಗಾಂಧಿಗಿರಿ ವಾದರಿ ಹೋರಾಟಕ್ಕೆ ಇಳಿದಿದ್ದಾರೆ.

ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ನಡೆದ ಬಿಳಿಕೆರೆ ಮಹದೇಶ್ವರಸ್ವಾಮಿ ಜಾತ್ರೆುಂ ದಿನದಂದು ಛಾಾಂಚಿತ್ರ ಪ್ರದರ್ಶನ ಆೋಂಜಿಸಿ ಗಮನ ಸೆಳೆದಿದ್ದಾರೆ. ಎರಡನೇ ಹಂತದಲ್ಲಿ ಸ್ಥಳೀುಂ ಶಾಸಕರು ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳಿಗೆ ಭೂ ಸ್ವಾಧೀನ ಪ್ರಕ್ರಿೆುಂ ಕೈಬಿಡುವಂತೆ ಮನವಿ ಸಲ್ಲಿಸಲಿದ್ದಾರೆ. ಮೈಸೂರು ಭಾಗದ ಪ್ರಭಾವಿ ಸ್ವಾಮೀಜಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ಅವರನ್ನು ಭೇಟಿ ವಾಡಿ ಮನವಿ ಸಲ್ಲಿಸಲು ಸ್ಥಳೀುಂ ಹೋರಾಟಗಾರರು ನಿರ್ಧರಿಸಿದ್ದಾರೆ.

ನಂಜನಗೂಡು ತಾಲ್ಲೂಕಿನ ಕಡಕೊಳ, ತಾಂಡ್ಯ ಕೈಗಾರಿಕಾ ಪ್ರದೇಶದಂತೆ ಇವ್ಮಾವು ಕೈಗಾರಿಕಾ ಪ್ರದೇಶದ ವಿಸ್ತರಣೆಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆುಂ ಪ್ರಸ್ತಾವನೆಗೆ ತಕ್ಕಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳು ೧,೦೩೭ ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದಾರೆ. ಹದಿನಾರು, ಅಡಕನಹಳ್ಳಿ, ಕೋಚನಹಳ್ಳಿ, ಸೋಮೇಶ್ವರಪುರ, ಆುಂರಹಳ್ಳಿ ಗ್ರಾಮಗಳ ರೈತರಿಗೆ ಭೂ ಸ್ವಾಧೀನಕ್ಕೆ ನೋಟಿಸ್ ಜಾರಿಗೊಳಿಸಿ, ೩೦ ದಿನಗಳಲ್ಲಿ ತಮ್ಮ ಆಕ್ಷೇಪಣೆ ಸಲ್ಲಿಸಬಹುದೆಂದು ಹೇಳುವ ಮೂಲಕ ರೈತರ ವಲುಂದಲ್ಲಿ ದೊಡ್ಡ ಆತಂಕವನ್ನುಂಟು ವಾಡಿದ್ದಾರೆ.

ಫಲವತ್ತಾದ ಕೃಷಿ ಭೂಮಿ: ನೀರಾವರಿ ಪ್ರದೇಶದಲ್ಲಿ ಅಥವಾ ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆುುಂವ ಪ್ರದೇಶದಲ್ಲಿ ಸ್ವಾಧೀನ ವಾಡಬಾರದೆಂಬ ನಿುಂಮವಿದ್ದರೂ ಏಕಾಏಕೀ ರೈತರಿಗೆ ನೋಟಿಸ್ ಜಾರಿಗೊಳಿಸಿರುವುದು ಭೂವಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ವರುಣ ನಾಲೆ ನಿರ್ಮಾಣಕ್ಕಿಂತ ಮುಂಚಿನಿಂದಲೂ ರೈತರು ದ್ವಿದಳಧಾನ್ಯಗಳು, ಎಣ್ಣೆಕಾಳುಗಳು, ರಾಗಿ, ಜೋಳ ಮೊದಲಾದ ಬೆಳೆಗಳನ್ನು ಮಳೆಯಾಶ್ರಿತವಾಗಿ ಬೆಳೆಯುತ್ತಿದ್ದರು. ವರುಣ ನಾಲೆ ನಿರ್ಮಾಣದ ನಂತರ ಕೆರೆ ಕಟ್ಟೆಗಳು ತುಂಬಿ ಸುತ್ತಮುತ್ತ ಅಂತರ್ಜಲ ಹೆಚ್ಚಾಗಿರುವುದರಿಂದ ನಾಲೆಯ ನೀರು ಮತ್ತು ಕೊಳವೆ ಬಾವಿಗಳ ಬಳಕೆ ಹೆಚ್ಚಾಗಿ ಭತ್ತ, ಕಬ್ಬು, ಬಾಳೆ, ತರಕಾರಿಗಳು,ತೆಂಗಿನ ತೋಟಗಳು,ಅರಣ್ಯ ಕೃಷಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವಿಶೇಷವಾಗಿ ಹುಳಿಮಾವು ನಿಟ್ರೆಗುಡ್ಡವಿದ್ದು, ಇಲ್ಲಿ ಅಪರೂಪದ ಸಸ್ಯಸಂಪತ್ತು, ಪಕ್ಷಿಸಂಕುಲಗಳು ಇವೆ.

ಜೀವವೈವಿಧ್ಯತೆಯ ತಾಣ ಹದಿನಾರು ಕೆರೆ: ಕರ್ನಾಟಕ ಜೀವ ವೈವಿಧ್ಯತೆಯ ಅಧ್ಯಯನದ ವರದಿ ಪ್ರಕಾರ ಹದಿನಾರು ಕೆರೆಯನ್ನು ಭರವಸೆಯ ಅಗ್ರತಾಣವನ್ನಾಗಿ ಗುರುತಿಸಲಾಗಿದೆ. ಹದಿನಾರು ಕೆರೆಯು ದೇಶ-ವಿದೇಶಗಳ ಪಕ್ಷಿಗಳಿಗೆ ಆಶ್ರಯ ತಾಣವಾಗಿದ್ದು, ಅಪರೂಪದ ನೀರು ನಾಯಿಗಳು ಸೇರಿದಂತೆ ಅಳಿವಿನಲ್ಲಿಂಚಿರುವ ಪಕ್ಷಿಪ್ರಭೇದಗಳು ಕೂಡ ನೆಲೆ ಕಂಡುಕೊಂಡಿವೆ. ಭೂಸ್ವಾಧೀನಪಡಿಸಿಕೊಳ್ಳಲು ಇಚ್ಛಸಿರುವ ಸ್ಥಳಗಳ ರೈತರ ಜಮೀನುಗಳು ಕೆರೆಯ ಜಲಾನಯನ ಪ್ರದೇಶ ಹಾಗೂ ಗುಡ್ಡಗಾಡುಗಳಿಂದ ಕೂಡಿದ್ದು,ಕಾರ್ಖಾನೆ ಆರಂಭವಾದರೆ ಜಲಮೂಲ ಕಲುಷಿತಗೊಂಡು ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಉಂಟಾಗಿದೆ.

ಈಗಾಗಲೇ ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸ್ವಾಧೀನ ನಿರ್ಧಾರ ಕೈಬಿಡುವಂತೆ ಪತ್ರ ಬರೆದಿದ್ದಾರೆ. ಹದಿನಾರು ಗ್ರಾಪಂನಲ್ಲಿ ಭೂಸ್ವಾಧೀನದ ವಿರುದ್ಧ ಠರಾವು ಮಾಡಲಾಗಿದೆ.

ಯಾವ್ಯಾವ ಗ್ರಾಮದಲ್ಲಿ ಎಷ್ಟೆಷ್ಟು ಎಕರೆ ಸ್ವಾಧೀನ?

ಕೋಚನಹಳ್ಳಿ-404.08

ಅಯರಹಳ್ಳಿ-122.36

ಸೋಮೇಶ್ವರಪುರ-170.10

ಹದಿನಾರು- 325.33

ಅಡಕನಹಳ್ಳಿ-13.25

ಹದಿನಾರು ಸೇರಿದಂತೆ ಐದು ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಅಂತಿಮ ಹಂತದ ಅಧಿಸೂಚನೆ ಹೊರಬೀಳಲಿದೆ. ಬಳಿಕ ಒಂದು ಎಕರೆಗೆ ಎಷ್ಟು ಭೂ ಪರಿಹಾರ ಎನ್ನುವುದು ಗೊತ್ತಾಗಲಿದೆ. ಭೂಸ್ವಾಧೀನ ನಿರ್ಧಾರವನ್ನು ವಿರೋಧಿಸಿ ರೈತರು ಆಕ್ಷೇಪಣೆ ಸಲ್ಲಿಸಿದ್ದಾರೆ. ಪ್ರಕ್ರಿಯೆ ಬಿಡುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು. -ಪ್ರಿಯಾದರ್ಶಿನಿ, ಭೂಸ್ವಾಧೀನಾಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ.

ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಗ್ರಾಮಸ್ಥರು, ರೈತರಲ್ಲಿ ಅರಿವು ಮೂಡಿಸಲು ಛಾಯಾಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ. ಭೂಸ್ವಾಧೀನದಿಂದ ರೈತರ ಜಮೀನು ಹಾಳಾಗುವ ಜತೆಗೆ, ಕೈಗಾರಿಕಾಕರಣದಿಂದ ದುಷ್ಪರಿಣಾಮ ಉಂಟಾಗಲಿದೆ. -ಕಿರಣ್, ಹದಿನಾರು ಗ್ರಾಮ.

 

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ