Mysore
27
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಗಿರಿಜನ ವಿದ್ಯಾರ್ಥಿ ಸಾವು; ವಾರ್ಡನ್, ಅಡುಗೆಯವರಿಗೆ ನೋಟಿಸ್ ಜಾರಿ

ಎಚ್.ಡಿ.ಕೋಟೆ: ಪಟ್ಟಣದ ಕೃಷ್ಣಾಪುರದ ವಿದ್ಯಾರ್ಥಿ ನಿಲಯದಲ್ಲಿ ಗಿರಿಜನ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ವಾರ್ಡನ್ ಮತ್ತು ಅಡುಗೆಯವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ತಾಲ್ಲೂಕಿನ ಮಾರನಹಾಡಿ ಗಿರಿಜನ ಯುವಕ, ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪಿುುಂಸಿ ವಿದ್ಯಾರ್ಥಿ ಆಕಾಶ್ ಸೋಮವಾರ ಪಟ್ಟಣದ ಕೃಷ್ಣಪುರದಲ್ಲಿರುವ ಖಾಸಗಿ ಕಟ್ಟಡದಲ್ಲಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯದಲ್ಲಿ ನೇಣು ಬಿಗಿದ ರೀತಿಯಲ್ಲಿ ಸಾವನಪ್ಪಿದ್ದ.

ಸೋಮವಾರ ರಾತ್ರಿ ಆಕಾಶ್ ಅವರ ಮರಣೋತ್ತರ ಪರೀಕ್ಷೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಿತು. ಮಂಗಳವಾರ ಮಧ್ಯಾಹ್ನ ಮಾರನ ಹಾಡಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.

ಪ್ರಕರಣ ದಾಖಲಿಸಿಕೊಂಡಿರುವ ಸರ್ಕಲ್ ಇನ್‌ಸ್ಪೆಕ್ಟರ್ ಬಸವರಾಜ್ ಅವರ ತಂಡ ಸಾವಿನ ನಿಖರ ವಿಚಾರ ತಿಳಿಯಲು ವಿದ್ಯಾರ್ಥಿ ನಿಲಯದ ವಾರ್ಡನ್, ಅಡುಗೆಯವರು ಹಾಗೂ ಆತನ ಸ್ನೇಹಿತರು, ಶಿಕ್ಷಕ, ಶಿಕ್ಷಕಿಯರ ವಿಚಾರಣೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮತ್ತಷ್ಟು ಕ್ರಮ ಕೈಗೊಳ್ಳುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.

ಪರಿಶಿಷ್ಟ ಕಲ್ಯಾಣ ಇಲಾಖೆಯ ಅಧಿಕಾರಿ ನಾರಾಯಣಸ್ವಾಮಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಡನ್ ಮತ್ತು ಅಡುಗೆಯವರಿಗೆ ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!