Mysore
28
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ತೆರಿಗೆದಾರರ ಹಣ ಪೋಲು ಮಾಡುತ್ತಿರುವುದು ಬೇಜವಾಬ್ದಾರಿ: ಎಚ್‌ಸಿಎಂ

ಮೈಸೂರು: ಮೈಸೂರಿನ ಭವ್ಯ ಪರಂಪರೆಯ ಮಹತ್ವ ಅರಿಯದ ಬಿಜೆಪಿಯ ಸಂಸದ ಮತ್ತು ಶಾಸಕರು, ಬಸ್ ನಿಲ್ದಾಣಗಳ ಮೇಲಿನ ಗುಂಬಜ್ ಒಡೆದು ಹಾಕುವ ಹುಚ್ಚಾಟ ಪ್ರದರ್ಶಿಸುತ್ತಿದ್ದು, ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿರುವುದು ಬೇಜವಾಬ್ದಾರಿ ನಡವಳಿಕೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಇಡೀ ಮೈಸೂರಿನ ತುಂಬಾ ಗುಂಬಜ್‌ನಂತಹ ವಿನ್ಯಾಸಗಳು ನಗರದ ಅಂದವನ್ನು ಹೆಚ್ಚಿಸಿದ್ದು, ಪ್ರವಾಸಿಗರಿಗೆ ಪಾರಂಪರಿಕ ಎನ್ನುವ ಭಾವನೆಯನ್ನು ಹುಟ್ಟು ಹಾಕುತ್ತವೆ. ಆದರೆ, ಇಂತಹ ವಿನ್ಯಾಸದ ಮಹತ್ವ ತಿಳಿಯದೇ ಮೈಸೂರಿನಲ್ಲಿ ವಿಕೃತಿ ತೋರುತ್ತಿರುವ ಬಿಜೆಪಿಗರು ನಿಜಕ್ಕೂ ಸಾರ್ವಜನಿಕ ಬದುಕಿನ ಜವಾಬ್ದಾರಿ ಏನು ಎಂಬುದನ್ನು ತಿಳಿಯದೇ ವರ್ತಿಸುತ್ತಿದ್ದಾರೆ.
ಭಾರತವನ್ನು ಮೊಘಲರು, ಬ್ರಿಟಿಷರು ಆಳಿದ್ದಾರೆ. ಮೌರ್ಯರು, ಡಚ್ಚರು, ಫ್ರೆಂಚರು ಮತ್ತು ಪೋರ್ಚುಗೀಸರೂ ಆಳಿದ್ದರೂ ಭಾರತ ಯಾವುದೋ ಒಂದು ಧರ್ಮದ ದೇಶವಾಗಿ ಪರಿವರ್ತನೆಯಾಗಿಲ್ಲ. ಭಾರತ ತನ್ನ ವೈವಿಧ್ಯ ತೆಗಳಿಂದ ಭಾರತವಾಗಿಯೇ ಉಳಿದಿದೆ. ಹೀಗಿದ್ದರೂ ಅಭಿವೃದ್ಧಿ ವಿಷಯಗಳನ್ನು ಮರೆ ಮಾಚಲು ಮತ್ತು ಚುನಾವಣಾ ಕಾಲದಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸುವ ಸಲುವಾಗಿ ಕೋಮು ರಾಜಕೀಯ ಮಾಡುತ್ತಿರುವ ಮೈಸೂರಿನ ಸಂಸದರು ಮತ್ತು ಶಾಸಕರು ಈ ಕೂಡಲೇ ತಮ್ಮ ಬೇಜವಾಬ್ದಾರಿ ನಡವಳಿಕೆಯನ್ನು ನಿಲ್ಲಿಸಿ, ಜನರ ತೆರಿಗೆ ಹಣವನ್ನು ಪೋಲು ಮಾಡಬಾರದು ಎಂದು ಈ ಮೂಲಕ ಆಗ್ರಹಿಸುತ್ತೇನೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!