Mysore
27
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಗೃಹಿಣಿ ಬಳಿ ಇದ್ದ ಮೊಬೈಲ್, ಪರ್ಸ್ ದೋಚಿದ ದುಷ್ಕರ್ಮಿಗಳು

ಕೊಳ್ಳೇಗಾಲ: ಗೃಹಿಣಿಯೊಬ್ಬರು ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೊಬೈಲ್ ಮತ್ತು ಪರ್ಸ್ ಅನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಇಲ್ಲಿನ ಅನುಪಮ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ಯೋಗಚಂದ್ರ ಅವರ ಪತ್ನಿ ಶೋಭ ಅವರು ಮೊಬೈಲ್, ಪರ್ಸ್ ಕಳೆದುಕೊಂಡವರು.

ಜನನಿ ಆಸ್ಪತ್ರೆಯ ಬಳಿ ಫೋನ್‌ನಲ್ಲಿ ಮಾತನಾಡಿಕೊಂಡು ಹೋಗುವಾಗ ಇಬ್ಬರು ಬೈಕ್ ಸವಾರರು ಹಿಂದಿನಿಂದ ಬಂದು ಮೊಬೈಲ್ ಹಾಗೂ ಪರ್ಸನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ.
ತಕ್ಷಣ ಇವರು ಪೊಲೀಸ್ ಠಾಣೆಗೆ ಬಂದು ಈ ಸಂಬಂಧ ದೂರು ಸಲ್ಲಿಸಿದಾಗ ಪೊಲೀಸರು ತಕ್ಷಣ ಅಲ್ಲಿದ್ದ ಸಿಸಿ ಟಿವಿ ಮಾಹಿತಿ ಸಂಗ್ರಹಿಸಿ ಕಳ್ಳರ ಮಾಹಿತಿಗಳನ್ನು ಪಡೆದು, ಆರೋಪಪಿ ಗುರುಪ್ರಸಾದ್ ಅಲಿಯಾಸ್ ಕೂಳೆ ಎಂಬಾತನನ್ನು ಬಂಧಿಸಿ ಈತನಿಂದ ಎಗರಿಸಿದ್ದ ಮೊಬೈಲ್ ಹಾಗೂ ಪರ್ಸನ್ನು ಹಾಗೂ ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಬ್ಬ ಆರೋಪಿ ಗುರು ಅಲಿಯಾಸ್ ಡಾಲಿ ತಲೆ ಮರೆಸಿಕೊಂಡಿದ್ದಾನೆ. ಗುರುಪ್ರಸಾದ್‌ಗೆ ನ್ಯಾಯಾಧೀಶರು ೧೫ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಪರಾಧ ವಿಭಾಗದ ಎಸ್‌ಐ ಉಮಾವತಿ ತನಿಖೆ ನಡೆಸುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!