Mysore
26
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಗಿರಿಜನರಿಗೆ ಶೇ.3ರಷ್ಟು ಮೀಸಲಾತಿ ಬಿಟ್ಟುಕೊಡ ಆಗ್ರಹ

ಮೈಸೂರು: ಅರಣ್ಯ ಆಧಾರಿತ ೧೨ ಬುಡಕಟ್ಟು ಸಮುದಾಯಗಳಿಗೆ ಹಿಂದೆ ಇದ್ದ ಶೇ.೩ರಷ್ಟು ಮೀಸಲಾತಿ ಮತ್ತು ಆದಿವಾಸಿಗಳ ವಾಸ ಸ್ಥಳಗಳನ್ನು ಬಿಟ್ಟುಕೊಡಬೇಕು ಎಂದು ರಾಜ್ಯ ಮೂಲ ಆದಿವಾಸಿ ವೇದಿಕೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಖಜಾಂಚಿ ಕೃಷ್ಣಮೂರ್ತಿ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ನ್ಯಾ.ನಾಗಮೋಹನ್ ದಾಸ್ ಸಮಿತಿ ಶಿಫಾರಸ್ಸಿನಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವುದು ಸ್ವಾಗತಾರ್ಹ. ಆದರೆ, ಈ ಹಿಂದೆ ಅರಣ್ಯ ಆಧಾರಿತ ಆದಿವಾಸಿಗಳಿಗೆ ನೀಡಿದ್ದ ಶೇ.೩ರಷ್ಟು ಮೀಸಲಾತಿ ನಿಜವಾದ ಆದಿವಾಸಿಗಳಿಗೆ ದಕ್ಕುತ್ತಿಲ್ಲ ಎಂದು ಬೇಸರಿಸಿದರು.
ಪರಿಶಿಷ್ಟ ಪಂಗಡದ ಕೆಲ ಸಮುದಾಯಗಳು ಮೀಸಲಾತಿಯ ಲಾಭ ಪಡೆದು ಮೂಲ ಆದಿವಾಸಿಗಳಿಗೆ ಅನ್ಯಾಯ ಮಾಡಿವೆ. ಇದರಿಂದ ಸಮುದಾಯದಲ್ಲಿ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೂ ಸರ್ಕಾರಿ ಕೆಲಸಗಳು ಕೈ ತಪ್ಪುತ್ತಿವೆ. ಪಿಎಚ್.ಡಿ. ಪಡೆದವರಿಗೂ ಕೆಲಸವಿಲ್ಲದಂತಾಗಿದೆ ಹೇಳಿದರು.
ಸಂವಿಧಾನ ಬದ್ಧ ೨೦೦೬ರ ಅರಣ್ಯ ಹಕ್ಕು ಕಾಯಿದೆಯಂತೆ ಸರ್ಕಾರ ಅರಣ್ಯ ವಾಸಿಗಳನ್ನು ಕಾಡಿಗೆ ಬಿಟ್ಟು ಸ್ವಾತಂತ್ರ್ಯವಾಗಿ ಜೀವನ ಮಾಡಲು ಅನುವು ಮಾಡಿಕೊಡಬೇಕು. ಹುಲಿ ಸಂರಕ್ಷಣಾ ಯೋಜನೆ ಹೆಸರಿನಲ್ಲಿ ಆದಿವಾಸಿಗಳಿಗೆ ಅನ್ಯಾಯ ಮಾಡಲು ಹೊರಟಿರುವುದು ಖಂಡನೀಯ. ಆದಿವಾಸಿ ಸಂರಕ್ಷಣಾ ಯೋಜನೆಯಡಿ ಆದಿವಾಸಿಗಳ ಮೂಲ ನೆಲೆಯನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಸಂಯೋಜಕ ವಿಜಯಕುಮಾರ, ಲ್ಯಾಂಪ್ಸ್ ನಿರ್ದೇಶಕ ಶಿವರಾಜು ಅಂಕನಾಥಪುರ, ಸೋಲಿಗರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ.ಜಡೇಸ್ವಾಮಿಗೌಡ, ರಾಜ್ಯ ಜೇನುಕುರುಬ ಅಭಿವೃದ್ಧಿ ಅಧ್ಯಕ್ಷ ಜೆ.ಟಿ.ರಾಜಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!