Mysore
13
few clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಬೈಕ್‌ಗೆ ಕ್ಯಾಂಟರ್ ಡಿಕ್ಕಿ: ಸವಾರ ಸಾವು

ಮಂಡ್ಯ: ನಗರದ ರೈಲ್ವೆ ನಿಲ್ದಾಣದ ಮುಂಭಾಗ ಬೆಂಗಳೂರು-ಮೈಸೂರು ಹೆದ್ದಾರಿಯ ಬಾಟಾ ಶೋರೂಮ್ ಬಳಿ ಕ್ಯಾಂಟರ್ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ನಗರದ ರಾಜಕುಮಾರ್ ಬಡಾವಣೆಯ ಆಂಟೋನಿಯವರ ಪುತ್ರ ಪಿ.ಎ. ಜಾರ್ಜ್ ವಿಜಯ್ ಕುಮಾರ್ (೫೪) ಎಂಬುವರೇ ಮೃತಪಟ್ಟವರು.
ಬಾಟಾ ಶೋರೂಂ ಬಳಿ ಮಂಗಳವಾರ ರಾತ್ರಿ ಜಾರ್ಜ್ ವಿಜಯ ಕುಮಾರ್ ಅವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಕ್ಯಾಂಟರ್‌ಗೆ ಲಾರಿ ಹಿಂಬದಿಯಿAದ ಗುದ್ದಿದೆ. ಈ ಪರಿಣಾಮ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದಾಗ ಜಾರ್ಜ್ ವಿಜಯ್ ಕುಮಾರ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಮೃತರಿಗೆ ಪತ್ನಿ ಪ್ರೌಢಶಾಲಾ ಶಿಕ್ಷಕಿ ಮೇರಿ ಅನಿತಾ, ಪುತ್ರಿಯರಾದ ಆಂಜಲಿನ್ ಜಾರ್ಜ್, ಆನಿಷ ಜಾರ್ಜ್ ಇದ್ದು, ಹಿರಿಯ ಮಗಳಾದ ಆಂಜಲಿನ್ ಜಾರ್ಜ್ ಜರ್ಮನಿಯಲ್ಲಿ ಎಂಎಸ್ ಮಾಡುತ್ತಿದ್ದು, ಬುಧವಾರ ರಾತ್ರಿ ಮಂಡ್ಯ ನಗರಕ್ಕೆ ಆಗಮಿಸಲಿದ್ದು, ಗುರುವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಹೊರವಲಯದ ಹೆಬ್ಬಾಳದ ಬಳಿಯಿರುವ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!