Mysore
20
broken clouds

Social Media

ಶನಿವಾರ, 21 ಫೆಬ್ರವರಿ 2026
Light
Dark

ವಿವಿಧ ರೀತಿಯ ಲೆಕ್ಕಗಳನ್ನು ಮಾಡಿ ರಾಷ್ಟ್ರಮಟ್ಟದಲ್ಲಿ ಜಯ

ಮಡಿಕೇರಿ: ಮಡಿಕೇರಿಯ ಬ್ರೈನೋಬ್ರೈನ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು  ಚೆನ್ನೈನ ಟ್ರೇಡ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ನಡೆದ ಬ್ರೈನೋಬ್ರೈನ್ ಫೆಸ್ಟ್-೨೦೨೨, ೪೦ನೇ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ
ಕೇವಲ ೩ ನಿಮಿಷ ಸಮಯದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತಿ ಚುರುಕಾಗಿ ಮಾಡುವ ಮೂಲಕ  ೭ ಚಾಂಪಿಯನ್ ಟ್ರೋಫಿ, ೩ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

೧೦ ಮಂದಿಗಳು ಪ್ರಶಸ್ತಿ ಪಡೆದುಕೊಂಡಿದ್ದಲ್ಲದೆ ಮಡಿಕೇರಿ ತರಬೇತಿ ಕೇಂದ್ರವು ಬೆಸ್ಟ್ ಫ್ಯಾಕಲ್ಟಿ ಅವಾರ್ಡ್ ಹಾಗೂ ಬೆಸ್ಟ್ ಫ್ರಾಂಚೈಸಿ ಅವಾರ್ಡ್ ಅನ್ನು ಪಡೆದುಕೊಂಡಿತು. ಬ್ರೈನೋಬ್ರೈನ್ ಇಂಟರ್‌ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ ಹಾಗೂ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಟ್ರೋಫಿ ಮತ್ತು ಪದಕಗಳನ್ನು ವಿತರಿಸಿದರು. ಪ್ರಾದೇಶಿಕ ನಿರ್ದೇಶಕ ನೀಲ್ ಕಮಲ್, ಚೇತಸ್, ನುಷ್ಕ ಕೊಡೆಂದರ, ಧ್ರುತಿ ಜೆ.ಪೂಜಾರಿ, ಎನ್.ಕೆ. ಚಹನ, ನಾಪಂಡ ನೀಶ ಪೂವಣ್ಣ, ಪ್ರತ್ಯೂಶ ಎಂ.ಸುವರ್ಣ, ಮೀನಾಕ್ಷಿ ಡಿ.ಎಂ ಚಾಂಪಿಯನ್ ಟ್ರೋಫಿ ಪಡೆದರೆ, ಎನ್.ನಿರನ್ ಪೂವಣ್ಣ, ಲಿಕಿತ್ ಜಿ.ವಿ, ಕುನಾಲ್ ಪ್ರಸಾದ್ ಡಬ್ಲ್ಯೂ.ವಿ ಚಿನ್ನದ ಪದಕ ಪಡೆದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!