ಭಿಲ್ಲೋರೆಯವರಿಂದ ಸ್ಫೂರ್ತಿಗೊಂಡ ನೂರಾರು ಜನ ಮುಂಬೈಕಾರರು ಅವರೊಂದಿಗೆ ಕೈಜೋಡಿಸಿ, ‘ಫಿಲ್ಲ್ ಇನ್ ದಿ ಪೋಟ್ ಹೋಲ್ಸ್ ಪ್ರಾಜೆಕ್ಟ್’ ಎಂಬ ಒಂದು ಒಂದು ನಾಗರಿಕರ ಸಮಿತಿ ರಚಿಸಿ, ‘ಸ್ಪಾಟ್‌ಹೋಲ್’ ಎಂಬ ಒಂದು ಮೊಬೈಲ್ ಆಪ್‌ಅನ್ನು ಪ್ರಾರಂಭಿಸಿದರು. ಜನ ಈ ಆಪ್‌ಅನ್ನು ಬಳಸಿ ತಾವು ಗುರುತಿಸಿದ ರಸ್ತೆಗುಂಡಿಯ ಫೋಟೋ, ಮತ್ತು ಅದು ಇರುವ ಜಾಗದ ವಿವರಗಳನ್ನು ಮುನಿಸಿಪಾಲಿಟಿಗೆ ಕಳುಹಿಸಬಹುದು. ಮುನಿಸಿಪಾಲಿಟಿ ನೌಕರರು ಸೂಕ್ತ ಸಾಮಾಗ್ರಿಗಳೊಂದಿಗೆ ಬಂದು ಅದನ್ನು ತುಂಬಿಸಿದರಾಯಿತು. ದಾದಾರಾವ್‌ರಿಂದ ಸ್ಫೂರ್ತಿಗೊಂಡ ದೂರದ ತೆಲಂಗಾಣದ ಬಾಲಾ ಗಂಗಾಧರ್ ತಿಲಕ್ ಎಂಬ ಒಬ್ಬರು ನಿವೃತ್ತ ರೈಲ್ವೇ ನೌಕರರು ಹೀಗೆಯೇ ರಸ್ತೆಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಅವರು ಮುಚ್ಚಿರುವ ಗುಂಡಿಗಳ ಸಂಖ್ಯೆ ಈಗಾಗಲೇ ಒಂದೂವರೆ ಸಾವಿರ ಗಡಿದಾಟಿದೆ.
೨೦೧೫. ಮಳೆಗಾಲದ ಜುಲೈ ತಿಂಗಳ ೨೮ನೇ ತಾರೀಕು. ೧೦ನೇ ತರಗತಿ ಪಾಸು ಮಾಡಿದ ೧೬ ವರ್ಷ ಪ್ರಾಯದ ಪ್ರಕಾಶ್ ಭಿಲ್ಲೋರೆಯವರಿಂದ ಸ್ಫೂರ್ತಿಗೊಂಡ ನೂರಾರು ಜನ ಮುಂಬೈಕಾರರು ಅವರೊಂದಿಗೆ ಕೈಜೋಡಿಸಿ, ‘ಫಿಲ್ಲ್ ಇನ್ ದಿ ಪೋಟ್ ಹೋಲ್ಸ್ ಪ್ರಾಜೆಕ್ಟ್’ ಎಂಬ ಒಂದು ಒಂದು ನಾಗರಿಕರ ಸಮಿತಿ ರಚಿಸಿ, ‘ಸ್ಪಾಟ್‌ಹೋಲ್’ ಎಂಬ ಒಂದು ಮೊಬೈಲ್ ಆಪ್‌ಅನ್ನು ಪ್ರಾರಂಭಿಸಿದರು. ಜನ ಈ ಆಪ್‌ಅನ್ನು ಬಳಸಿ ತಾವು ಗುರುತಿಸಿದ ರಸ್ತೆಗುಂಡಿಯ ಫೋಟೋ, ಮತ್ತು ಅದು ಇರುವ ಜಾಗದ ವಿವರಗಳನ್ನು ಮುನಿಸಿಪಾಲಿಟಿಗೆ ಕಳುಹಿಸಬಹುದು. ಮುನಿಸಿಪಾಲಿಟಿ ನೌಕರರು ಸೂಕ್ತ ಸಾಮಾಗ್ರಿಗಳೊಂದಿಗೆ ಬಂದು ಅದನ್ನು ತುಂಬಿಸಿದರಾಯಿತು. ಆದರೂ, ಮುನಿಸಿಪಾಲಿಟಿಯ ಪ್ರತಿಸ್ಪಂದನೆ ತೃಪ್ತಿಕರವಾಗಿಲ್ಲ ಎಂದು ದಾದಾರಾವ್ ಭಿಲ್ಲೋರೆ ಹಲುಬುತ್ತಾರೆ.
ದಾದಾರಾವ್‌ರಿಂದ ಸ್ಫೂರ್ತಿಗೊಂಡ ದೂರದ ತೆಲಂಗಾಣದ ಬಾಲಾ ಗಂಗಾಧರ್ ತಿಲಕ್ ಎಂಬ ಒಬ್ಬರು ನಿವೃತ್ತ ರೈಲ್ವೇ ನೌಕರರು ಹೀಗೆಯೇ ರಸ್ತೆಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಅವರು ಮುಚ್ಚಿರುವ ಗುಂಡಿಗಳ ಸಂಖ್ಯೆ ಈಗಾಗಲೇ ಒಂದೂವರೆ ಸಾವಿರ ಗಡಿದಾಟಿದೆ.ಭಿಲ್ಲೋರೆ ಮುಂಬೈಯ ಉಪನಗರ ಭಾಂಡುಪಿನ ಒಂದು ಕಾಲೇಜಿಗೆ ಪ್ರವೇಶ ಅರ್ಜಿ ಕೊಟ್ಟು, ಸೋದರ ಸಂಬಂಧಿ ರಾಮ್ ಎಂಬುವವರ ಮೋಟಾರ್ ಬೈಕಿನ ಹಿಂಬದಿಯಲ್ಲಿ ಕುಳಿತು, ಅಂಧೇರಿಯ ತನ್ನ ಮನೆಗೆ ಹಿಂತಿರುಗುತ್ತಿದ್ದನು. ಮಳೆ ಜೋರಾಗಿ ಸುರಿಯುತ್ತಿತ್ತು. ಸೀಪ್ಜ್ ಎಂಬಲ್ಲಿ ಜೋಗೇಶ್ವರಿ-ವಿಕ್ರೋಲಿ ಲಿಂಕ್ ರೋಡ್ ತಲುಪಿದಾಗ, ಅವರ ಬೈಕ್ ನೀರು ತುಂಬಿದ ಒಂದು ರಸ್ತೆ ಗುಂಡಿಗೆ ಬಿತ್ತು. ಬಿದ್ದ ರಭಸಕ್ಕೆ ರಾಮ್ ಸುಮಾರು ಐದು ಅಡಿ ದೂರಕ್ಕೆ ಹೋಗಿ ಬಿದ್ದನು. ಅವನು ಹೆಲ್ಮೆಟ್ ಧರಿಸಿದ್ದರಿಂದ ಹೆಚ್ಚಿನ ಅನಾಹುತವಾಗಲಿಲ್ಲ. ಆದರೆ, ಹತ್ತು ಅಡಿ ದೂರಕ್ಕೆ ಎಸೆಯಲ್ಪಟ್ಟ ಪ್ರಕಾಶ್ನ ತಲೆ ರಸ್ತೆಗೆ ಅಪ್ಪಳಿಸಿ ಪ್ರಜ್ಞಾಹೀನನಾಗಿ ಬಿದ್ದನು. ಆಚೀಚೆ ಹೋಗಿ ಬರುವ ಜನ ತಮ್ಮ ಮೊಬೈಲುಗಳಲ್ಲಿ ಅವರ ಫೋಟೋ ಹಿಡಿಯುತ್ತಿದ್ದರೇ ವಿನಃ ಯಾರೊಬ್ಬರು ಅವರ ಸಹಾಯಕ್ಕೆ ಮುಂದಾಗಲಿಲ್ಲ. ತುಸು ಚೇತರಿಸಿಕೊಂಡ ರಾಮ್ ತನ್ನ ಸ್ನೇಹಿತರಿಗೆ ಕರೆ ಮಾಡಿ, ಪ್ರಕಾಶನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದನು. ಆದರೆ, ಪ್ರಕಾಶ್ ಉಳಿಯಲಿಲ್ಲ.
ಪ್ರಕಾಶ್ ಭಿಲ್ಲೋರೆ ತನ್ನ ತಂದೆತಾಯಿಗೆ ಒಬ್ಬನೇ ಮಗ. ತಂದೆ ದಾದಾರಾವ್ ಭಿಲ್ಲೋರೆ ಅಂಧೇರಿಯಲ್ಲಿ ಚಿಕ್ಕದೊಂದು ತರಕಾರಿ ಅಂಗಡಿ ನಡೆಸುತ್ತಿದ್ದಾರೆ. ಮಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಎಂದು ಫೋನ್ ಕರೆ ಬಂದಾಗ ಅವರು ಏಕಾದಶಿ ಉಪವಾಸ ಬಿಡುವ ತಯಾರಿ ನಡೆಸುತ್ತಿದ್ದರು. ಫೊನ್ ಕರೆ ಬರುತ್ತಲೇ ಆಸ್ಪತ್ರೆಗೆ ಓಡಿದರು. ಅಲ್ಲಿ, ಹೊಸ ಬಟ್ಟೆ ಧರಿಸಿಕೊಂಡು ಕಾಲೇಜಿಗೆ ಹೋಗುವ ಕನಸು ಕಾಣುತ್ತಿದ್ದ ಮಗ ಹೆಣವಾಗಿ ಮಲಗಿದ್ದನ್ನು ಕಾಣುತ್ತಲೇ ಅವರ ದುಃಖದ ಕಟ್ಟೆ ಒಡೆಯಿತು. ಮನೆಯಲ್ಲಿ ತಾಯಿಯ ಗೋಳು ಮುಗಿಲು ಮುಟ್ಟಿತು.
ಪ್ರಕಾಶ್ ಈ ಮೊದಲು ಆನ್ ಲೈನ್ ಶಾಪಿಂಗಲ್ಲಿ ಆರ್ಡರ್ ಕೊಟ್ಟ ಬಟ್ಟೆಗಳು ಒಂದೊಂದಾಗಿ ಮನೆಗೆ ಬರುತ್ತಿದ್ದಂತೆ ಅವರ ಜೀವ ಹಿಂಡಿದಂತಾಗುತ್ತಿತ್ತು. ಆದರೂ ದಾದಾರಾವ್ ಭಿಲ್ಲೋರೇ ತನ್ನ ಏಕಮಾತ್ರ ಪುತ್ರನ ಸಾವಿನ ದುಃಖದಲ್ಲಿ ಹೆಚ್ಚು ಕಾಲ ಮುಳುಗಿಹೋಗಲಿಲ್ಲ.
ಒಂದೇ ತಿಂಗಳಲ್ಲಿ ಚೇತರಿಸಿಕೊಂಡು, ಏನೋ ಒಂದು ನಿರ್ಧಾರ ಮಾಡಿದವರಂತೆ ತನ್ನ ದಿನಚರಿಯನ್ನೇ ಬದಲಾಯಿಸಿಕೊಂಡರು. ಆಗಸ್ಟ್ ತಿಂಗಳ ಒಂದು ದಿನ ಅವರು ಚಿಕ್ಕದೊಂದು ಹಾರೆ, ಸಿಮೆಂಟು ತುಂಬುವ ಬಾಣಲೆ ಹಿಡಿದು ತನ್ನ ಅಂಗಡಿಯಿಂದ ಹೊರ ಬಿದ್ದರು. ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಮರಳು, ಮಣ್ಣು ಮತ್ತು ಕಲ್ಲು ಇಟ್ಟಿಗೆ ತುಂಡುಗಳನ್ನು ತಂದು ಅಂಗಡಿಯ ಎದುರಿಗಿದ್ದ ಒಂದು ರಸ್ತೆಗುಂಡಿಯನ್ನು ಮುಚ್ಚಿದರು. ಪ್ರತೀ ಬಾರಿ ಆ ರಸ್ತೆಗುಂಡಿಯ ಮೇಲೆ ವಾಹನವೊಂದು ಸಲೀಸಾಗಿ ಹಾದು ಹೋಗುವುದನ್ನು ನೋಡುವಾಗ ಒಂದು ಜೀವವನ್ನು ಉಳಿಸಿದ ಸಂತೃಪ್ತಿ ಅವರಿಗೆ. ಆ ಸಂತೃಪ್ತಿಯೇ ಅಂದಿನಿಂದ ಪ್ರತೀದಿನ ರಸ್ತೆಗುಂಡಿಗಳನ್ನು ಮುಚ್ಚುವುದನ್ನು ಅವರ ದಿನಚರಿಯ ಒಂದು ಭಾಗವನ್ನಾಗಿಸಿಕೊಳ್ಳುವಂತೆ ಪ್ರೇರೇಪಿಸಿತು.
೨೦೧೫ ಆಗಸ್ಟ್ ತಿಂಗಳಿಂದ ಈವರೆಗೆ ಅವರು ತನ್ನ ಕೈಯ್ಯಾರೆ ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಿದ್ದಾರೆ!
ರಸ್ತೆಗುಂಡಿಗಳನ್ನು ಸರಿಪಡಿಸುವುದು ಮುನಿಸಿಪಾಲಿಟಿಯ ಕರ್ತವ್ಯ. ಹೀಗೆ ಅವರು ರಸ್ತೆಗುಂಡಿಗಳನ್ನು ಮುಚ್ಚುವುದರಿಂದ ಮುನಿಸಿಪಾಲಿಟಿ ನೌಕರರು ಇನ್ನಷ್ಟು ಸೊಂಬೇರಿಗಳನ್ನಾಗಿಸುವುದಿಲ್ಲವೇ ಎಂದು ಯಾರಾದರೂ ಕೇಳಿದರೆ ದಾದಾರಾವ್, ಒಂದು ರಸ್ತೆ ಗುಂಡಿಯ ಬಗ್ಗೆ ಮುನಿಸಿಪಾಲಿಟಿಗೆ ದೂರು ನೀಡಿದರೆ ಅವರು ಅದನ್ನು ಮುಚ್ಚುತ್ತಾರಾದರೂ ಆ ಕೆಲಸಕ್ಕೆ ಅವರು ೧೫-೨೦ ದಿನಗಳ ಕಾಲ ತೆಗೆದುಕೊಳ್ಳುತ್ತಾರೆ. ಅಷ್ಟರಲ್ಲಿ ಯಾರಿಗಾದರೂ ಅನಾಹುತವಾಗಬಹುದು. ಬೇರಾರಿಗೂ ನನ್ನ ಮಗನಿಗಾದುದು ಆಗಬಾರದು ಎಂಬ ಉದ್ದೇಶದಿಂದಷ್ಟೇ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಉತ್ತರಿಸುತ್ತಾರೆ.
ರಸ್ತೆಗುಂಡಿಗಳನ್ನು ಮುಚ್ಚುವ ಮೂಲಕವೇ ರಸ್ತೆಗುಂಡಿಗೆ ಬಲಿಯಾದ ತನ್ನ ಮಗನ ನೆನಪನ್ನು ಜೀವಂತವಾಗಿರಿಸಿಕೊಂಡಿರುವ ಈ ವಾತ್ಸಲ್ಯಮಯೀ ತಂದೆಗೆ ಇತರ ತಂದೆತಾಯಿಗಳು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
ದಾದಾರಾವ್ ಭಿಲ್ಲೋರೆ ರಸ್ತೆ ಗುಂಡಿಗಳನ್ನು ಮುಚ್ಚುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿ ಅದರಿಂದ ಎರಡು ಬೆಳವಣಿಗೆಗಳಾದವು. ಕಾರು, ಬೈಕು, ಸ್ಕೂಟರ್ ಸವಾರರು ರಸ್ತೆಗುಂಡಿಗಳಿಂದಾಗಿ ಅಪಾಯಕ್ಕೀಡಾಗುವುದು, ಸಾಯುವುದು ನಡೆದಾಗಲೆಲ್ಲ ಸಂತೃಸ್ತರು ಮುನಿಸಿಪಾಲಿಟಿ ಮೇಲೆ ಕೇಸು ದಾಖಲಿಸುವ ಕ್ರಮ ಬೆಳೆಯಿತು. ಮತ್ತು,
ಬಡ ಕುಟುಂಬದಿಂದ ಬಂದ ದಾದಾರಾವ್ ಭಿಲ್ಲೋರೆಯವರ ತಂದೆ ತಾಯಿಯಿಬ್ಬರೂ ರಸ್ತೆ ಕಾರ್ಮಿಕರಾಗಿದ್ದರು. ಬಹಳ ಸಣ್ಣ ಪ್ರಾಯದಲ್ಲೇ ದಾದಾರಾವ್ ಕೆಲಸ ಮಾಡಲು ಶುರು ಮಾಡಿದರು. ದಿನಪತ್ರಿಕೆಗಳನ್ನು ಹಾಕುವ ಕೆಲಸ ಮಾಡಿದರು. ನಂತರ, ಅಂಧೇರಿಯಲ್ಲಿ ತರಕಾರಿ ಮಾರಲು ಶುರು ಮಾಡಿ, ಈಗಿನ ತರಕಾರಿ ಅಂಗಡಿಯನ್ನು ತೆರೆದರು. ಪ್ರಕಾಶ್ ಕಲಿಕೆಯಲ್ಲಿ ಚುರುಕಿದ್ದುದರಿಂದ ಅವನನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿ, ಅವನು ಭವಿಷ್ಯದಲ್ಲಿ ದೊಡ್ಡ ವ್ಯಕ್ತಿಯಾಗುವ ಕನಸು ಕಾಣುತ್ತಿದ್ದರು. ಆ ಕನಸು ರಸ್ತೆಗುಂಡಿಯಲ್ಲಿ ಸಮಾಪ್ತಿಯಾದ ನಂತರ, ಆ ರಸ್ತೆಗುಂಡಿಗಳನ್ನು ಮುಚ್ಚುವುದರಲ್ಲಿ ತನ್ನ ಮಗನನ್ನು ಕಾಣುತ್ತಿದ್ದಾರೆ.
ಹಾಗೆಯೇ, ದಾದಾರಾವ್ ತನ್ನ ಮಗನ ಸಾವಿಗೆ ಭಾವನಾತ್ಮಕವಾಗಿ ಮಾತ್ರವೇ ಪ್ರತಿಕ್ರಿಯಿಸದೆ, ಆ ರಸ್ತೆಗುಂಡಿ ಮುಚ್ಚದೆ ಅವನ ಸಾವಿಗೆ ಕಾರಣರಾದ ಸಂಬಂಧಿತ ಮುನಿಸಿಪಾಲಿಟಿ ನೌಕರರು ಮತ್ತು ಆ ರಸ್ತೆಯ ಕಂಟ್ರಾಕ್ಟರ್ ಮೇಲೆ ಮೇಲೆ ಕೇಸು ಹಾಕಿದ್ದಾರೆ. ಅದು ಇನ್ನೂ ಬೋರಿವಲಿ ಕೋರ್ಟಲ್ಲಿ ನಡೆಯುತ್ತಿದ್ದು, ಅವರೆಲ್ಲ ಜಾಮೀನಿನ ಮೇಲೆ ಹೊರಗಿದ್ದಾರೆ. ಹೀಗೆಯೇ, ಎಲ್ಲಿಯೇ ಆಗಲಿ ರಸ್ತೆಗುಂಡಿಗಳಿಂದಾಗಿ ಅನಾಹುತ, ಪ್ರಾಣಹಾನಿಗೊಳಗಾದವರು ಸಂಬಂಧಿತ ಮುನಿಸಿಪಾಲಿಟಿಯ ಮೇಲೆ ಕ್ರಿಮಿನಲ್ ಕೇಸುಗಳನ್ನು ಹಾಕುವ ಪರಿಪಾಟ ಬೆಳೆದರೆ ಅದು ಸರ್ಕಾರಿ ನೌಕರೀಶಾಹಿಯ ಜಡತ್ವಕ್ಕೆ ಸೂಕ್ತ ಮದ್ದಾಗಬಹುದೋ ಏನೋ.