Mysore
21
scattered clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಅಕ್ರಮವಾಗಿ ಆಸ್ತಿ ಕಬಳಿಸುವ ಸಂಚು : ಮಾಜಿ ಶಾಸಕರ ಕುಟುಂಬದವರ ವಿರುದ್ದ ದೂರು

­ಮೈಸೂರು: ವಾರಸುದಾರರಿಲ್ಲದ ಆಸ್ತಿ ಕಬಳಿಸಲು ಸಂಚು ರೂಪಿಸಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವೆಸಗಿದ್ದ ಮಾಜಿ ಶಾಸಕರ ಕುಟುಂಬದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಟಿ.ನರಸೀಪುರ ಕ್ಷೇತ್ರದ ಮಾಜಿ ಶಾಸಕ ಲೇಟ್ ಶ್ರೀನಿವಾಸ ಅಯ್ಯಂಗಾರ್ ಸೊಸೆ ಲಲಿತಾ ಜಯಗೋಪಾಲ್, ಮೊಮ್ಮಗ ಸುಧೀರ್ ಜಯಗೋಪಾಲ್, ಮೊಮ್ಮಗಳು ಸುಮನ್ ಜಯಗೋಪಾಲ್ ವಿರುದ್ದ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಮೂವರು ಮೈಸೂರು ವರುಣಾ ಹೋಬಳಿ ಲಲಿತಾದ್ರಿಪುರ ಗ್ರಾಮದ ಸರ್ವೇ ನಂಬರ್ 206 ರಲ್ಲಿ 3 ಎಕರೆ 4 ಗುಂಟೆ ಜಮೀನಿಗೆ ಸಂಬಂಧಪಟ್ಟಂತೆ ಪೌತಿ ಖಾತೆ ಬದಲಾವಣೆ ಮಾಡಲು ಕೋರಿ 2022 ಏಪ್ರಿಲ್ 24 ರಂದು ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ವಹಿವಾಟಿಗೆ ಆರ್‌ಟಿಐ ಕಾರ್ಯಕರ್ತ ಬಿ.ಎನ್. ನಾಗೇಂದ್ರ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಹೆಚ್ಚುವರಿ ತಹಸೀಲ್ದಾರ್ ಎನ್. ವಿಶ್ವನಾಥ್ ವಿಚಾರಣೆ ನಡೆಸಿ, ಈ ಜಮೀನಿನ ಸಂಬಂಧ ಭೂಮಿ ಶಾಖೆಯಲ್ಲಿನ ನಡವಳಿಯನ್ನು ರದ್ದುಪಡಿಸಿ, ರಾಜಸ್ವ ನಿರೀಕ್ಷಕರಿಗೆ ಪೋರ್ಜರಿ ದಾಖಲೆ ಸೃಷ್ಟಿಸಿ ಅಕ್ರಮ ಖಾತೆ ಮಾಡಿಸಿಕೊಳ್ಳಲು ಯತ್ನಿಸಿದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಗತ್ಯ ಕ್ರಮ ವಹಿಸುವಂತೆ ಆದೇಶ ನೀಡಿದ್ದರು. ಅದರಂತೆ ಈ ಮೂವರ ವಿರುದ್ಧ ಕಂದಾಯ ಅಧಿಕಾರಿ ಶಂಕರ್ ಅವರು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!