Mysore
16
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಮುಂದಾದ ಉತ್ತರಖಂಡ್ ಸರ್ಕಾರ

ಡೆಹರಾಡೂನ್– ಮಧ್ಯಪ್ರದೇಶ ರಾಜ್ಯದ ಬಳಿಕ ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಕಲಿಸಲು ಉತ್ತರಖಂಡ್ ಸರ್ಕಾರ ಮುಂದಾಗಿದ್ದು, ಪಠ್ಯಕ್ರಮ ರಚನೆಗೆ ತಜ್ಞರ ಸಮಿತಿ ರಚಿಸಿದೆ.
ಉತ್ತರಖಂಡನ ವೈದ್ಯಕೀಯ ಶಿಕ್ಷಣ ಸಚಿವ ಧನ್‍ಸಿಂಗ್ ರಾವತ್ ಅವರು ಹೇಳಿಕೆ ನೀಡಿದ್ದು, ಸಮಿತಿ ವರದಿ ಸಲ್ಲಿಕೆ ಬಳಿಕ ಮುಂದಿನ ವರ್ಷದಿಂದ ವೈದ್ಯಕೀಯ ಶಿಕ್ಷಣದ ಪಠ್ಯಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ಬೋಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪಠ್ಯಕ್ರಮ ರಚನೆಗಾಗಿ ಪೌರಿ ಜಿಲ್ಲೆಯ ಶ್ರೀನಗರದ ಸರ್ಕಾರಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಎಂ.ಎಸ್.ರಾವತ್ ಅವರ ಅಧ್ಯಕ್ಷತೆಯಲ್ಲಿ ನಾಲ್ವರು ಅಧ್ಯಕ್ಷರ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶದ ಸರ್ಕಾರ ವೈದ್ಯಕೀಯ ಶಿಕ್ಷಣದ ಮೂರು ವಿಷಯಗಳನ್ನು ಹಿಂದಿಯಲ್ಲಿ ಕಲಿಸಲು ನಿರ್ಧಾರ ತೆಗೆದುಕೊಂಡಿದೆ. ಕಳೆದ ಅ.16ರಂದು ಕೇಂದ್ರ ಸಚಿವ ಅಮಿತ್ ಷಾ ಹಿಂದಿ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದ್ದರು.
ಮಧ್ಯಪ್ರದೇಶದ ಬಳಿಕ ಉತ್ತರಖಂಡ್ ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ಜಾರಿಗೊಳಿಸುತ್ತಿರುವ 2ನೇ ರಾಜ್ಯವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!