Mysore
26
overcast clouds

Social Media

ಭಾನುವಾರ, 14 ಜೂನ್ 2026
Light
Dark

ಅಂತರರಾಜ್ಯಕ್ಕೆ ಸಾಗಿಸುತ್ತಿದ್ದ ಸ್ಪಿರಿಟ್ ವಶ

ಕೇರಳ ಮೂಲದ ಇಬ್ಬರು ಆರೋಪಿಗಳ ಬಂಧನ

ಚಾಮರಾಜನಗರ: ರುಳ್ಳಿ ಮೂಟೆಗಳ ಮಧ್ಯೆದಲ್ಲಿಅಂತರರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 5ಲಕ್ಷರೂ.ಮೌಲ್ಯದ ಸ್ಪಿರಿಟ್ ಹಾಗೂ ವಾಹನವನ್ನು ತಾಲ್ಲೂಕಿನ ಪುಣಜನೂರು ಬಳಿ ಶುಕ್ರವಾರ ಪೊಲೀಸರುವಶಪಡಿಸಿಕೊಂಡುಇಬ್ಬರು ಆರೋಪಿಗಳನ್ನುಬಂಧಿಸಿದ್ದಾರೆ.

ಕೇರಳದ ಪಾಲಕ್ಕಾಡ್ ನ ಹರಿ, ಆಲಟ್ಟೂರಿನ ವಿನೋದ್ ಕುಮಾರ್ ಬಂಧಿತರು. ಮಹೇಂದ್ರ ಪ್ಯೊರೋ ವಾಹನದಲ್ಲಿ ಈರುಳ್ಳಿ ಸಾಗಿಸುವ ಸೋಗಿನಲ್ಲಿ ಸ್ಪಿರಿಟ್ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿ ಸಿಕ್ಕಿ ಬಿದ್ದಿದ್ದಾರೆ.
32ಲೀಟರ್ ಸಾಮರ್ಥ್ಯ ದ 202ಕ್ಯಾನ್ ಗಳಲ್ಲಿದ್ದ ಸುಮಾರು 7070ಲೀಟರ್ ಅಕ್ರಮ ಸ್ಪಿರಿಟ್ ದಾಳಿ ವೇಳಿ ಸಿಕ್ಕಿದ್ದು ತನಿಖೆ ಮುಂದುವರೆದಿದೆ.
ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಎಸ್ಪಿ ಸುಂದರರಾಜ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಎಸ್. ಆನಂದ್ ಮತ್ತು ಸಿಬ್ಬಂದಿ ದಾಳಿ ಮಾಡಿದ್ದು ಎಸ್ಪಿ ಶಿವಕುಮಾರ್ ಅವರು ಈ ಪತ್ತೆ ಕಾರ್ಯ ವನ್ನು ಪ್ರಶಂಸಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!