Mysore
23
clear sky

Social Media

ಶನಿವಾರ, 03 ಜನವರಿ 2026
Light
Dark

ಕೊರಗಜ್ಜನ ದೇವಸ್ಥಾನದಲ್ಲಿ ದೀಪಾವಳಿ

ಮೈಸೂರು: ನಗರದ ದಟ್ಟಗಳ್ಳಿಯಲ್ಲಿರುವ ಸ್ವಾಮಿ ಕೊರಗಜ್ಜ ದೈವಸ್ತಾನದಲ್ಲಿ ೧೦ ಸಾವಿರ ದೀಪಗಳನ್ನು ಬೆಳಗುವ ಮೂಲಕ ಹಾಗೂ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿ ವಿಶೇಷವಾಗಿ ಆಚರಿಸಲಾಯಿತು.

ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಮಾತನಾಡಿ, ತುಳುನಾಡಿನ ಆರಾಧ್ಯ ದೈವ ಕೊರಗಜ್ಜನು ಹಿಂದೂ ಧರ್ಮದ ಶಕ್ತಿಯುತ ದೈವ. ಕೊರಗಜ್ಜ ಹಿಂದೂ ಧರ್ಮದ ಭಾಗವಲ್ಲ ಎಂದು ಕೆಲವು ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಪ್ರತಿಯೊಬ್ಬ ಹಿಂದೂ ಕೂಡ ಇದಕ್ಕೆ ಕಿವಿಗೊಡಬೇಡಿ. ಕೊರಗಜ್ಜನು ಧರ್ಮದ ಶಕ್ತಿ ಎಂದರು.

ದೇವಸ್ಥಾನದ ಪುರೋಹಿತ ತೇಜುಕುಮಾರ್, ಮುಖಂಡ ಬಂಗಾರಪ್ಪ, ಕೃಷ್ಣ , ಜೀವನ್, ಪ್ರದೀಪ್, ವಿನಯ್‌, ಸತ್ಯನಾರುಂಣ, ಪ್ರಥಮ್ ಮುಂತಾದವರು ಹಾಜರಿದ್ದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!