Mysore
25
haze

Social Media

ಮಂಗಳವಾರ, 06 ಜನವರಿ 2026
Light
Dark

ಮಂಡ್ಯ : ಆಕಸ್ಮಿಕ ವಿದ್ಯುತ್‌ ತಗುಲಿ ಇಬ್ಬರ ಸಾವು

ಮಂಡ್ಯ : ಸ್ಟುಡಿಯೋ ಮುಂದೆ ನಾಮಫಲಕವನ್ನ ಹಾಕಲು ಹೋದ ಇಬ್ಬರು ವ್ಯಕ್ತಿಗಳಿಗೆ ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲ್ಲೂಕಿನ ಮರಳಿಗ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಮರಳಿಗ ಗ್ರಾಮದ ಎಂ ವಿವೇಕ್, ಗೆಜ್ಜಲಗೆರೆ ಮಧುಸೂಧನ್ ಎಸ್ ಎಂಬುವವರೆಗೆ ವಿದ್ಯುತ್ ಶಾಕ್ ನಿಂದ ನಿಧನರಾದವರು.ಇವರು ತಮ್ಮ ಲಕ್ಷ್ಮಿ ಸ್ಟುಡಿಯೋ ಮುಂದೆ ನಾಮಫಲಕವನ್ನ ಹಾಕಲು ಹೋದಾಗ ವಿದ್ಯುತ್ ಶಾಕ್ ತಗುಲಿದೆ. ತಕ್ಷಣವೇ ಇವರನ್ನು ಚಿಕಿತ್ಸೆಗಾಗಿ ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ನಿಧನರಾಗಿದ್ದಾರೆ.
ಇವರ ನಿಧನಕ್ಕೆ ಕುಟುಂಬಸ್ಥರು, ಛಾಯಾಗ್ರಾಹಕರ ಬಳಗವು ಕಂಬಿನಿ ಮಿಡಿದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!