Mysore
26
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ರೈತರ ಜಮೀನಿಗೆ ಲಗ್ಗೆಯಿಟ್ಟ ಒಂಟಿ ಸಲಗ : ಕಬ್ಬು, ನೆಲಗಡಲೆ, ತೆಂಗು ಬೆಳೆ ನಾಶ

ಹನೂರು: ಒಂಟಿ ಸಲಗವೊಂದು ರೈತರ ಜಮೀನಿಗೆ ಲಗ್ಗೆಯಿಟ್ಟು ಬೆಳೆಯನ್ನು ನಾಶ ಮಾಡಿರುವ ಘಟನೆ ಬುಧವಾರ ರಾತ್ರಿ ಅಜ್ಜಿಪುರ ಹೊರವಲಯದ ಜಮೀನಿನಲ್ಲಿ ನಡೆದಿದೆ.

ಶಿವಶಂಕರ್ ಎಂಬುವರ ಮಾಲೀಕತ್ವದ ಸ.ನಂ.56/2 ಜಮೀನಿನಲ್ಲಿ ಅಜ್ಜಿಪುರ ಗ್ರಾಮದ ನಂಜಪ್ಪ ಸಣ್ಣಮ್ಮ ದಂಪತಿಗಳು ಗುತ್ತಿಗೆ ಆಧಾರದ ಮೇಲೆ ಬೇಸಾಯ ಮಾಡಿಕೊಂಡಿದ್ದ ಜಮೀನಿಗೆ ರಾತ್ರಿ ಲಗ್ಗೆ ಇಟ್ಟಿರುವ ಒಂಟಿ ಸಲಗ ಜಮೀನಿನಲ್ಲಿ ಬೆಳೆಯಲಾಗಿದ್ದ ಕಬ್ಬು, ನೆಲಗಡಲೆ, ತೆಂಗು ಬೆಳೆಯನ್ನು ತಿಂದು ತುಳಿದು ನಾಶಗೊಳಿಸಿರುವುದಲ್ಲದೇ ಜಮೀನಿನಲ್ಲಿ ಅಳವಡಿಸಲಾಗಿದ್ದ ಗುಣಮಟ್ಟದ ತಂತಿಬೇಲಿ ನೀರಿನ ಪರಿಕರಗಳನ್ನು ನಾಶಗೊಳಿಸಿದೆ.
ರೈತರ ಕಣ್ಣೀರು: ಜಮೀನಿನಲ್ಲಿ ಸಾಲಸೋಲ ಮಾಡಿ ಬೆಳೆಯಲಾಗಿದ್ದ ಬೆಳೆಗಳನ್ನು ಕಾಡಾನೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ರೈತ ಕುಟುಂಬ ಕಂಗಾಲಾಗಿದೆ.ಈ ಜಮೀನಿಗೆ ನಿರಂತರವಾಗಿ ಒಂಟಿ ಸಲಗ ಪ್ರತಿ ದಿನ ನಿರಂತರವಾಗಿ ದಾಳಿ ನಡೆಸುತ್ತಿದ್ದು ಅರಣ್ಯ ಇಲಾಖೆಯವರು ಸೂಕ್ತ ಕ್ರಮವಹಿಸಿದೆ ಇರುವುದರ ಬಗ್ಗೆ ಆಂದೋಲನದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಬಗ್ಗೆ ರೈತನಂಜಪ್ಪ ಮಾತನಾಡಿ, ಕಾಡಾನೆಯು ನಿರಂತರವಾಗಿ ನಮ್ಮ ಜಮೀನಿಗೆ ಬಂದು ಬೆಳೆಗಳನ್ನು ನಾಶ ಮಾಡಿ ಹೋಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅವರಿಗೆ ಸಾಕಷ್ಟು ಬಾರಿ ಮನವಿಯನ್ನು ಸಲ್ಲಿಸಿದ್ದರು ಕೂಡ ಇಲ್ಲಿವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆ ಬೆಳೆ ನಾಶ ಮಾಡಿರುವುದರಿಂದ ನಾವು ಸಂಕಷ್ಟಕ್ಕೆ ತುತ್ತಾಗಿವೆ. ಹಾಗಾಗಿ ಅರಣ್ಯ ಇಲಾಖೆ ಅವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರವನ್ನು ಒದಗಿಸಬೇಕು. ಕಾಡಾನೆ ಬೆಳೆಗಳನ್ನು ನಾಶ ಮಾಡಿರುವುದಲ್ಲದೆ ನಮ್ಮ ಮೇಲೆ ದಾಳಿ ಮಾಡುವ ಅಪಾಯವನ್ನು ಎದುರಿಸುತ್ತಿದ್ದೇವೆ. ನಮ್ಮ ಮನೆಯ ಹತ್ತಿರದವರೆಗೂ ಕಾಡಾನೆ ಯಾವುದೇ ಭಯವಿಲ್ಲದೆ ಬರುತ್ತಿದ್ದು, ನಾವು ಯಾವುದೇ ಪ್ರತಿರೋಧ ಒಡ್ಡಿದ್ದರು ಜಗ್ಗುವುದಿಲ್ಲ. ಒಂದು ವೇಳೆ ಆನೆಯಿಂದ ಆಸ್ತಿ ಹಾನಿ ಪ್ರಾಣ ಹಾನಿ ಆದರೆ ಇದಕ್ಕೆ ಅರಣ್ಯ ಇಲಾಖೆ ಕಾರಣವಾಗುತ್ತದೆ ಎಂದು ರೈತ ದಂಪತಿಗಳು ಕಣ್ಣೀರಿಟ್ಟಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ