Mysore
29
overcast clouds

Social Media

ಬುಧವಾರ, 17 ಜೂನ್ 2026
Light
Dark

ಪವರ್ ಸ್ಟಾರ್ ಗೆ ಅಪಮಾನ ಖಂಡಿಸಿ ಠಾಣೆಗೆ ದೂರು

ಗುಂಡ್ಲುಪೇಟೆ : ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಆರೋಪಿಯನ್ನು ಕೂಡಲೇ ಗಡಿಪಾರು ಮಾಡುವಂತೆ ಒತ್ತಾಯಿಸಿ ತಾಲೂಕಿನ ಬೇಗೂರು ಗ್ರಾಮದ ಆರ್ಯ ಈಡಿಗ ಜನಾಂಗ ಹಾಗೂ ಕರ್ನಾಟಕ ರಕ್ಷಣಾ ಕನ್ನಡ ಕಹಳೆ ಸಂಘಟನೆ ಮತ್ತು ಅಪ್ಪು ಅಭಿಮಾನಿಗಳ ಬಳಗ ಬೇಗೂರು ಇವರುಗಳ ವತಿಯಿಂದ ದೂರು ಸಲ್ಲಿಸಲಾಯಿತು.

 

ಆರೋಪಿಯದ ಮೈಸೂರಿನ ಲಿಂಗದೇವರು ಕೊಪ್ಪಲು ಗ್ರಾಮದ ಮಲ್ಲಿಕಾರ್ಜುನ ಅಲಿಯಾಸ್ ಪುಟ್ಟು ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತು ಅವಮಾನಕಾರಿ ಹೇಳಿಕೆ ನೀಡಿರುವುದು ಕನ್ನಡ ಕುಲಕ್ಕೆ ಅಪಮಾನ ಮಾಡಿದಂತಾಗಿದೆ, ಇದು ನಮ್ಮ ಹಾಗೂ ಅಪ್ಪು ಅಭಿಮಾನಿಗಳ ಮನಸ್ಸಿಗೆ ಬಹಳ ನೋವುಂಟು ಮಾಡಿರುವ ಹಿನ್ನೆಲೆ ಕೂಡಲೇ ಆತನನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸುವ ಮೂಲಕ ಠಾಣೆಯ ಎಎಸ್ಐ ಜಯರಾಮ್ ಅವರಿಗೆ ಲಿಖಿತ ರೂಪದಲ್ಲಿ ದೂರು ನೀಡಿದರು.

 

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ಕನ್ನಡ ಕಹಳೆ ಸಂಘಟನೆ ಜಿಲ್ಲಾಧ್ಯಕ್ಷ ಗೋಪಿ ಬೇಗೂರು ಹೋಬಳಿ ಆರ್ಯ ಈಡಿಗ ಸಮುದಾಯದ ಯಜಮಾನರುಗಳಾದ  ಸುರೇಶ್, ಲೋಕೇಶ್,ಸೋಮಹಳ್ಳಿ ಮಂಜು, ಪರ್ಮಿ,ಸೀನ, ಮಣಿ , ಶಕೀ , ವಿಶು,ವಾಸು, ಯೋಗೇಶ್,ಆನಂದ್,ಮುಂತಾದವರು ಹಾಜರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!