Mysore
31
few clouds

Social Media

ಭಾನುವಾರ, 11 ಅಕ್ಟೋಬರ್ 2026
Light
Dark

ಪ್ರತಾಪ್ ಸಿಂಹ ಸಮಯ ಕೊಟ್ಟರೇ ಟಿಪ್ಪುವಿನ ವಿಚಾರ ವಿನಿಮಯ : ಮಾಜಿ ಸಚಿವ

ಮೈಸೂರು:ಟಿಪ್ಪು ಸುಲ್ತಾನ್ ನಾಡಿಗೆ ನೀಡಿರುವ ಕೊಡುಗೆಯ ಬಗ್ಗೆ ಪ್ರಶ್ನಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಅವರ ಜೊತೆಗೆ ವಿಚಾರ ವಿನಿಮಯಕ್ಕೆ ಸಿದ್ಧ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ತಿಳಿಸಿದ್ದಾರೆ.

ಟಿಪ್ಪು ಮತಾಂಧ, ದೇಶದ್ರೋಹಿ ಎಂದೆಲ್ಲ ಹೇಳಿರುವ ಸಂಸದ ಪ್ರತಾಪ ಸಿಂಹ ಅವರು ಟಿಪ್ಪು ಕೊಡುಗೆ ಕುರಿತು ಪ್ರಶ್ನಿಸಿದ್ದಾರೆ. ನಾನೂ ಕೂಡ ಒಂದಷ್ಟು ಆಧಾರಗಳನ್ನು ಇಟ್ಟುಕೊಂಡಿದ್ದೇನೆ. ಹಾಗಾಗಿ ಪ್ರತಾಪಸಿಂಹ ಒಪ್ಪಿಕೊಂಡು ಸಮಯ ತಿಳಿಸಿದರೆ ವಿಚಾರ ವಿನಿಮಯ ಮಾಡಿಕೊಳ್ಳೋಣ. ಆದರೆ, ಇದು ಸವಾಲಲ್ಲ ಎಂದಿದ್ದಾರೆ ಕಾಂಗ್ರೆಸ್ ಮುಖಂಡರಾಗಿರುವ ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್

ಟಿಪ್ಪು ಸಮರ್ಥಕರು ಆತ ನಾಡಿಗೆ ನೀಡಿರುವ 3 ಕೊಡುಗೆಗಳ ಬಗ್ಗೆ ತಿಳಿಸಲಿ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ  ಮಾತನಾಡಿದ ಅವರು, ಟಿಪ್ಪು ಮತಾಂಧ, ದೇಶದ್ರೋಹಿ ಎಂದೆಲ್ಲಹೇಳಿರುವ ಸಂಸದ ಪ್ರತಾಪ ಸಿಂಹ ಅವರು ಟಿಪ್ಪು ಕೊಡುಗೆ ಕುರಿತು ಪ್ರಶ್ನಿಸಿದ್ದಾರೆ. ನಾನೂ ಕೂಡ ಒಂದಷ್ಟು ಆಧಾರಗಳನ್ನು ಇಟ್ಟುಕೊಂಡಿದ್ದೇನೆ. ಹಾಗಾಗಿ ಪ್ರತಾಪಸಿಂಹ ಒಪ್ಪಿಕೊಂಡು ಸಮಯ ತಿಳಿಸಿದರೆ ವಿಚಾರ ವಿನಿಮಯ ಮಾಡಿಕೊಳ್ಳೋಣ. ಆದರೆ, ಇದು ಸವಾಲಲ್ಲ,”ಎಂದು ಚಂದ್ರಶೇಖರ್‌ ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!