Mysore
30
scattered clouds

Social Media

ಬುಧವಾರ, 20 ಮೇ 2026
Light
Dark

ಮೈಸೂರಿನ ಸುತ್ತ ಮುತ್ತ ಭಾರೀ ಮಳೆ… ಕೆರೆಗಳಂತಾದ ರಸ್ತೆಗಳು

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ಮಹಾಮಳೆಯ ಪರಿಣಾಮ ಜಿಲ್ಲೆಯ ಕಾಳಿಹುಂಡಿ ಗ್ರಾಮದಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನ ಇಂದು ಸಂಜೆ  ಸಂಪೂರ್ಣ ಜಲಾವೃತವಾಗಿದೆ

ರಸ್ತೆಗಳೆಲ್ಲಾ ಕೆರೆಗಳಂತಾಗಿದ್ದು, ವಿದ್ಯಾರ್ಥಿಗಳು ಶಾಲೆಗೆ ಹೋಗಲಾಗದೇ ಪರದಾಡಿದ್ದಾರೆ. ಇನ್ನು ಮಳೆಯ ಅವಾಂತರದಿಂದ ರೋಸಿಹೋಗಿರೋ ಗ್ರಾಮಸ್ಥರು, ಹಳ್ಳಿಯಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲ. ಒತ್ತುವರಿಯಾಗಿರುವ ರಸ್ತೆಯನ್ನು ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗ್ತಿಲ್ಲ ಅಂತಾ ಕಿಡಿಕಾರಿದ್ದಾರೆ.

ಇದೇ ವೇಳೆ, ಟಿ.ನರಸೀಪುರ ತಾಲೂಕಿನಲ್ಲೂ ಧಾರಾಕಾರ ಮಳೆಯಾಗಿದೆ. ವಿಸಿ ನಾಲೆ ಚಾನಲ್​​ ಕೋಡಿ ಒಡೆದು ನೂರಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿದೆ. ಸ್ಥಳಕ್ಕೆ ವಿಸಿ ನಾಲಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೆಸಿಬಿ ಮೂಲಕ ಒಡೆದ ಕೋಡಿ ಮುಚ್ಚಲು ಅಧಿಕಾರಿಗಳು ಹರಸಾಹಪಟ್ಟರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!